10 ಲಕ್ಷ ರೂ. ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮನೆಯಲ್ಲೇ ಬಿತ್ತು ಗುಸಾ

Public TV
2 Min Read
GROOM DOWRY LOCKKNOW 1

ಲಕ್ನೋ: ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ವರನೊಬ್ಬ ಮದುವೆ ಸಮಯದಲ್ಲಿ ಹೆಚ್ಚು ಹಣ ಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾನೆ. ಈ ಪರಿಣಾಮ ಅಲ್ಲಿದ್ದ ಜನರು ಆತನನ್ನು ಥಳಿಸಿದ್ದು, ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡಲಾಗಿದೆ.

marriage

ಸಾಹಿಬಾಬಾದ್‍ನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಶುಕ್ರವಾರ ರಾತ್ರಿ ಆರತಕ್ಷತೆ ಸಮಾರಂಭ ನಡೆಯುತ್ತಿದ್ದು, ಈ ವೇಳೆ ವರನ ಕಡೆಯವರು 10 ಲಕ್ಷ ರೂ. ವರದಕ್ಷಿಣೆ ಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ವಧುವಿನ ಕಡೆಯವರು ವರನ ಜೊತೆ ಕೆಟ್ಟದಾಗಿ ಮಾತನಾಡು ಪ್ರಾರಂಭಿಸಿದ್ದಾರೆ. ನಂತರ ವರನನ್ನು ಮಂಟಪದಿಂದ ಎಳೆದೊಯ್ದು ಥಳಿಸಲು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ:  ಎರಡು ವರ್ಷಗಳಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ 57 ನೌಕರರ ವಿರುದ್ಧ ಶಿಸ್ತುಕ್ರಮ

ಈ ವೇಳೆ ಆತನ ಸಂಬಂಧಿ ವಧುವಿನ ಕಡೆಯವರನ್ನು ತಡೆದಿದ್ದಾರೆ. ಗಲಾಟೆ ನಡೆಯುತ್ತಿರಬೇಕಾದರೆ ಸಂಭಾಗಣದಲ್ಲಿದ್ದ ಜನರು ಈ ಘಟನೆಯನ್ನು ಫೋನ್ ನಲ್ಲಿ ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅದು ಅಲ್ಲದೇ ವರನ ವಿರುದ್ಧ ದೂರು ಸಹ ದಾಖಲಾಗಿದೆ.

GROOM DOWRY LOCKKNOW

ವರನಿಗೆ 10 ಲಕ್ಷ ರೂ!
ವಧುವಿನ ಪೋಷಕರಿಗೆ ವರನ ತಂದೆ ವರದಕ್ಷಿಣೆಯಾಗಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದು, ಒಂದು ವೇಳೆ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮದುವೆಯನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ – 13 ಮಂದಿಗೆ 20 ವರ್ಷ ಜೈಲು

FotoJet 11 2

ಅದು ಅಲ್ಲದೇ ವಧುವಿನ ಮನೆಯವರು ಈಗಾಗಲೇ 3 ಲಕ್ಷ ರೂಪಾಯಿ ನಗದು ಮತ್ತು 1 ಲಕ್ಷ ರೂಪಾಯಿ ಮೌಲ್ಯದ ವಜ್ರದ ಉಂಗುರವನ್ನು ವರನಿಗೆ ನೀಡಿದ್ದು, ಆದರೂ ಅವರು ಇನ್ನು ಹೆಚ್ಚು ಹಣಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ನಮಗೆ ಇನ್ನು ಹೆಚ್ಚು ಕೊಡಲು ಸಾಧ್ಯವಾಗಲ್ಲ ಎಂದು ವರನ ಕಡೆಯವರಿಗೆ ಎಷ್ಟೇ ಮನವೊಲಿಸಿದರೂ ಅವರಿಗೆ ಮನವರಿಕೆ ಆಗಲಿಲ್ಲ. ಇದರಿಂದ ಕೋಪಗೊಂಡ ವಧುವಿನ ಮನೆಯವರು ವರನಿಗೆ ಥಳಿಸಿದ್ದಾರೆ.

ವರನನ್ನು ಮುಝಮ್ಮಿಲ್ ಎಂದು ಗುರುತಿಸಲಾಗಿದ್ದು, ಆಗ್ರಾ ನಿವಾಸಿಯಾಗಿದ್ದಾನೆ. ಈತ ಈ ಹಿಂದೆ 2-3 ಬಾರಿ ಮದುವೆಯಾಗಿದ್ದಾನೆ ಎಂದು ವಧುವಿನ ಕಡೆಯವರು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *