ಕಳ್ಳತನ ಮಾಡಲು ಬಂದರೆಂದು ನಾಲ್ವರು ಮಹಿಳೆಯರ ಬೆತ್ತಲೆ ಮೆರವಣಿಗೆ – ಐವರು ಅರೆಸ್ಟ್

Public TV
2 Min Read
PAK WOMEN

ಲಾಹೋರ್: ನಾಲ್ವರು ಮಹಿಳೆಯರು ಅಂಗಡಿಯಲ್ಲಿ ಕಳ್ಳತನ ಮಾಡಲು ಬಂದರೆಂದು ಪಾಕಿಸ್ತಾನದ ಜನರ ಗುಂಪು ಅವರ ಮೇಲೆ ಮಾರಾಮಾರಿ ಹಲ್ಲೆ ಮಾಡಿದ್ದು, ಬೆತ್ತಲೆ ಮೆರವಣಿಗೆ ಮಾಡಿಸಿದ್ದಾರೆ. ಈ ಹಿನ್ನೆಲೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಪಂಜಾಬ್ ಪೊಲೀಸರು ಅರೆಸ್ಟ್ ಮಾಡಿದ್ದು, ಇನ್ನೊಳಿದ ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ.

ನಡೆದಿದ್ದೇನು?
ಪಂಜಾಬ್ ನ ಲಾಹೋರ್‍ನಿಂದ 180 ಕಿಮೀ ದೂರದಲ್ಲಿರುವ ಫೈಸಲಾಬಾದ್‍ನಲ್ಲಿ ನಾಲ್ವರು ಮಹಿಳೆಯರು ಉಸ್ಮಾನ್ ಎಲೆಕ್ಟ್ರಿಕ್ ಅಂಗಡಿಯೊಳಗೆ ಹೋಗಿ ನೀರಿನ ಬಾಟಲಿಯನ್ನು ಕೇಳಿದ್ದಾರೆ. ಆದರೆ ಅಲ್ಲಿಂದ ಅಂಗಡಿಯ ಮಾಲೀಕ ಸದ್ದಾಂ ಇವರು ಕಳ್ಳತನ ಮಾಡಲು ಬಂದಿದ್ದಾರೆ ಎಂದು ಆರೋಪಿಸಿ ಅವರನ್ನು ಥಳಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಪಾಕಿಸ್ತಾನದ ಜನರ ಗುಂಪೊಂದು ಆ ಮಹಿಳೆಯರನ್ನು ಅಂಗಡಿಯಿಂದ ಎಳೆದು ತಂದು ಅವರನ್ನು ನಿರ್ವಸ್ತ್ರ ಮಾಡಿದ್ದಾರೆ. ಈ ವೇಳೆ ವೀಡಿಯೋ ಮಾಡುತ್ತಿದ್ದು, ಆ ಮಹಿಳೆಯರು ಮಾನ ಮುಚ್ಚಿಕೊಳ್ಳಲು ಬಟ್ಟೆಯನ್ನು ನೀಡುವಂತೆ ಮನವಿ ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಅದು ಅಲ್ಲದೇ ಅವರನ್ನು ದೊಣ್ಣೆಗಳಿಂದ ಥಳಿಸಲಾಗಿದೆ. ಇದನ್ನೂ ಓದಿ: ಟ್ರೈನ್ ಟಿಕೆಟ್ ರದ್ದು ಮಾಡಿದ್ದಕ್ಕೆ ದಂಡ ವಿಧಿಸಿದವನನ್ನೇ ಕೊಂದ ಸಹೋದರರು!

PAK WOMEN

ಈ ವೇಳೆ ನಾವೇನು ತಪ್ಪು ಮಾಡಿಲ್ಲ, ನಮ್ಮನ್ನು ಹೋಗಲು ಬಿಡಿ ಎಂದು ಜನರಲ್ಲಿ ಅಳುತ್ತಾ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಒಂದು ಗಂಟೆ ಕಾಲ ಆ ಮಹಿಳೆಯರನ್ನು ಬೀದಿಗಳಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು.

ಐವರ ಬಂಧನ!
ಈ ವೀಡಿಯೋ ಸೋಶಿಯಲ್ ವೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪಂಜಾಬ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅದು ಅಲ್ಲದೇ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ದಾಳಿ ನಡೆಸಲಾಗಿದ್ದು, ಸದ್ದಾಂ ಸೇರಿದಂತೆ ಐವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಫೈಸಲಾಬಾದ್ ಪೊಲೀಸ್ ಮುಖ್ಯಸ್ಥ ಡಾ.ಅಬಿದ್ ಖಾನ್ ಮಂಗಳವಾರ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

Police Jeep 1

ಈ ಘಟನೆಯಲ್ಲಿ ಭಾಗಿಯಾದ ಎಲ್ಲರ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಪ್ರಸ್ತುತ ಈ ಐವರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಕುರಿತು ಸಂತ್ರಸ್ತೆ, ಫೈಸಲಾಬಾದ್‍ನ ಬಾವಾ ಚಾಕ್ ಮಾರುಕಟ್ಟೆಗೆ ತ್ಯಾಜ್ಯ ಸಂಗ್ರಹಿಸಲು ನಾವು ಹೋಗಿದ್ದೆವು. ಈ ವೇಳೆ ನಾವು ಬಾಯಾರಿಕೆಯಿಂದ ಉಸ್ಮಾನ್ ಎಲೆಕ್ಟ್ರಿಕ್ ಅಂಗಡಿಯೊಳಗೆ ಹೋಗಿ ನೀರಿನ ಬಾಟಲಿಯನ್ನು ಕೇಳಿದ್ದೆವು. ಆದರೆ ಆ ಮಾಲೀಕ ಸದ್ದಾಂ ನಾವು ಕಳ್ಳತನದ ಉದ್ದೇಶದಿಂದ ಅಂಗಡಿಗೆ ಪ್ರವೇಶಿಸಿದ್ದೇವೆ ಎಂದು ನಮ್ಮ ಮೇಲೆ ಆರೋಪಿಸಿದರು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಟೆಸ್ಟಿಂಗ್ ಹೆಚ್ಚಳ

ಸದ್ದಾಂ ಮತ್ತು ಇತರ ಜನರು ನಮ್ಮನ್ನು ಥಳಿಸಲು ಪ್ರಾರಂಭಿಸಿದರು. ನಂತರ ಅವರು ನಮ್ಮನ್ನು ನಿರ್ವಸ್ತ್ರಗೊಳಿಸಿ, ಬೀದಿಗೆ ಎಳೆದೊಯ್ದು ಥಳಿಸಿದರು. ಈ ವೇಳೆ ನಮ್ಮ ವೀಡಿಯೋಗಳನ್ನೂ ಮಾಡಿದ್ದಾರೆ. ಈ ದುಷ್ಕøತ್ಯವನ್ನು ತಡೆಯಲು ಯಾರು ಸಹ ಪ್ರಯತ್ನಿಸಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *