ಭಾರತದಲ್ಲಿ ಇತ್ತೀಚೆಗೆ ಕೊರೊನಾ ರೂಪಾಂತರ ಓಮಿಕ್ರಾನ್ ಅಬ್ಬರ ಹೆಚ್ಚಾಗುತ್ತಿದ್ದು, ಪೋಷಕರಿಗೆ ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಭಾರೀ ಗೊಂದಲವಿದೆ. ಈ ಸಂಬಂಧ ಕೆಲವೊಂದು ಟಿಪ್ಸ್ ಅನ್ನು ಪೋಷಕರಿಗೆ ಇಲ್ಲಿ ಕೊಡಲಾಗುತ್ತಿದೆ.
ಮೀನಾಕ್ಷಿ ಮಿಷನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರಾದ ಡಾ.ಎಸ್.ಸೆಂಥಿಲ್‍ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಹಿಂದಿನ ಎರಡು ಕೋವಿಡ್ ಅಲೆಗಳಿಂದ ಮಕ್ಕಳು ಸಹ ಅಪಾಯವನ್ನು ಎದುರಿಸಿದ್ದರು. ಆದರೆ ವಯಸ್ಕರಿಗೆ ಹೋಲಿಸಿದರೆ ಮಕ್ಕಳಿಗೆ ಈ ಸೋಂಕು ಹರಡುವುದು ಕಮ್ಮಿ ಇತ್ತು. ಅದಕ್ಕೆ ನಾವು ಹೆಚ್ಚು ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯವಾಗಿತ್ತೆ. ಅದು ಅಲ್ಲದೇ ಲಾಕ್‍ಡೌನ್‍ಗಳನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೆಚ್ಚು ಜನರು ವ್ಯಾಕ್ಸಿನೇಷನ್ ತೆಗೆದುಕೊಂಡರೆ ಈ ಆಕ್ರಮಣಕಾರಿ ಸೋಂಕಿನ ತೀವ್ರತೆ ಹೆಚ್ಚಿನ ಮಟ್ಟದಲ್ಲಿ ಬರದಂತೆ ನಾವು ನೋಡಿಕೊಳ್ಳಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಎರಡು ಡೋಸ್ ಲಸಿಕೆ ಪಡೆದವರಿಗೆ ಓಮಿಕ್ರಾನ್ ತೀವ್ರತೆ ಇರಲ್ಲ: ಕೆ. ಸುಧಾಕರ್
ಮಕ್ಕಳ ಕಡೆ ಗಮನವಿರಲಿ!
* ಮಕ್ಕಳಿಗೆ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವಂತೆ ಶಿಕ್ಷಣ ನೀಡಿ.
* ಏನೇ ಮುಟ್ಟಿದರೂ ಕೈ ತೊಳೆಯುವುದು ಬಹಳ ಮುಖ್ಯ.
* ಜನಸಂದಣಿ ಇರುವಂತಹ ಜಾಗದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಏಕೆಂದರೆ ಓಮಿಕ್ರಾನ್ ಗಾಳಿಯ ಮೂಲಕ ಬಹಳ ವೇಗವಾಗಿ ಹರಡುತ್ತದೆ.
* ಮಕ್ಕಳಿಗೆ ಬಿದಿಬದಿಯ ಅಥವಾ ಕ್ಯಾಂಟೀನ್‍ಗಳಲ್ಲಿ ಊಟ ಮಾಡಿಸುವುದನ್ನು ಕಡಿಮೆ ಮಾಡಿ. ಮನೆ ಊಟ ಮಾಡಲು ಸೂಚಿಸಿ.
* ಎಲ್ಲದಕ್ಕಿಂತ ಮುಖ್ಯವಾಗಿ ನಾವು ಮಕ್ಕಳಿಗೆ ವೈರಸ್ ಕುರಿತು ಶಿಕ್ಷಣ ನೀಡಬೇಕು ಮತ್ತು ಅವರು ಶಾಲೆಯಲ್ಲಿದ್ದಾಗ ಅನುಸರಿಸಬೇಕಾದ ಸುರಕ್ಷತಾ ಪ್ರೋಟೋಕಾಲ್‍ಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಸಬೇಕು.
ಡಾ.ಎಸ್.ಸೆಂಥಿಲ್‍ಕುಮಾರ್, ಮಕ್ಕಳ ಕಡೆ ತೀವ್ರ ನಿಗಾ ಇಡುವುದು ತುಂಬಾ ಮುಖ್ಯವಾಗಿರುತ್ತೆ. ಎಲ್ಲಾ ವೈರಸ್‍ಗಳು ಸಾಮಾನ್ಯವಾಗಿ ರೂಪಾಂತರಗಳು. ಅವುಗಳು ಜೀನ್ ಮಾರ್ಪಾಡುಗಳಿಂದ ತಮ್ಮ ರಚನೆ ಮತ್ತು ಕಾರ್ಯಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ನಿರಂತರವಾಗಿ ವಿಕಸನಗೊಳ್ಳುತ್ತಿರುತ್ತೆ. ಇದು ನೈಸರ್ಗಿಕ ಸಾಮಥ್ರ್ಯವನ್ನು ಹೊಂದಿವೆ. ಕೆಲವೊಮ್ಮೆ ಈ ರೂಪಾಂತರಗಳು ಮೂಲ ವೈರಸ್‍ಗಿಂತ ಕಡಿಮೆ ಶಕ್ತಿಯನ್ನು ಹೊಂದಿರುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 7, ಜೈಪುರದಲ್ಲಿ 9 ಜನರಿಗೆ ಓಮಿಕ್ರಾನ್- 21ಕ್ಕೆ ಏರಿದ ಕೇಸ್
ಅಮೃತಾ ಆಸ್ಪತ್ರೆಯ ಜನರಲ್ ಪೀಡಿಯಾಟ್ರಿಕ್ಸ್‍ನ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಸಿ.ಜಯಕುಮಾರ್, ಈ ವೈರಸ್‍ನ ಸ್ವರೂಪದ ಬಗ್ಗೆ ಸರಿಯಾದ ಚಿತ್ರಣವನ್ನು ನಾವು ಪಡೆಯುವವರೆಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳುಬೇಕು. ಆಯಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುವುದು ನಮ್ಮ ಕರ್ತವ್ಯವಾಗಿದೆ. ಲಸಿಕೆಯ ಎರಡೂ ಡೋಸ್‍ಗಳನ್ನು ಪಡೆಯುವುದು ಬಹಳ ಮುಖ್ಯ. ಅದು ಅಲ್ಲದೇ ಬೂಸ್ಟರ್ ಡೋಸ್‍ಗಳಿಗೆ ಸರ್ಕಾರವು ಶೀಘ್ರದಲ್ಲೇ ಸೂಚನೆಯನ್ನು ನೀಡುತ್ತೆ ಎಂದು ತಿಳಿಸಿದರು.