ದೇಶದಲ್ಲಿ ಒಮಿಕ್ರಾನ್ ಕೇಸ್ 21ಕ್ಕೆ ಏರಿಕೆ – ಒಂದೇ ದಿನ 17 ಹೊಸ ಪ್ರಕರಣ ಪತ್ತೆ

Public TV
1 Min Read
OMICRON Karnataka

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಒಂದೇ ದಿನದಲ್ಲಿ 17 ಹೊಸ ಪ್ರಕರಣ ಪತ್ತೆಯಾಗುವ ಮೂಲಕ ದೇಶದಲ್ಲಿ ಓಮಿಕ್ರಾನ್ ಕೇಸ್ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

omicron beds

ರಾಜಸ್ಥಾನದ ಜೈಪುರದಲ್ಲಿ 9, ಮಹಾರಾಷ್ಟ್ರದಲ್ಲಿ 7 ಮಂದಿಯಲ್ಲಿ ಹೊಸ ರೂಪಾಂತರ ಸೋಂಕು ಪತ್ತೆಯಾಗಿದೆ. ಈ ಪ್ರಕರಣಗಳು ವರದಿಯಾದ ಬೆನ್ನಲ್ಲೆ ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಭಾನುವಾರ 21ಕ್ಕೆ ಏರಿಕೆ ಕಂಡಿದೆ. ಹೊಸ ರೂಪಾಂತರ ಸೋಂಕು ಪತ್ತೆಯಾದವರು ಹೆಚ್ಚು ಕೇಸ್ ಕಾಣಿಸಿಕೊಂಡ ದೇಶಗಳ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ ಅಥವಾ ರೋಗಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾಗಿದೆ.

omicron beds1

ಕೊರೊನಾ ವೈರಸ್‍ಗೆ ಸೋಂಕು ದೃಢವಾದ ನಂತರ ಎಲ್ಲಾ ಸೋಂಕಿತರಲ್ಲಿ ಹೊಸ ರೂಪಾಂತರ ಸೋಂಕಿನ ಬಗ್ಗೆ ಖಚಿತಪಡಿಸಿಕೊಳ್ಳಲು ಜೀನೋಮ್ ಪರೀಕ್ಷೆ ನಡೆಸಲಾಗಿದೆ. ಮಹಾರಾಷ್ಟ್ರದ ಪಿಂಪ್ರಿ ಚಿಂಚ್‍ವಾಡ್‍ನಲ್ಲಿ 6, ಪುಣೆಯಲ್ಲಿ 1 ಹೊಸ ಪ್ರಕರಣಗಳು ವರದಿಯಾಗಿದೆ. ರಾಜಸ್ಥಾನದ ಹೊಸ ಪ್ರಕರಣಗಳಲ್ಲಿ ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಕುಟುಂಬದ ನಾಲ್ವರು ಸದಸ್ಯರು ಸೇರಿದ್ದು, ಅಲ್ಲದೇ ಅವರ ಐದು ಸ್ನೇಹಿತರಲ್ಲಿ ಸಹ ಓಮಿಕ್ರಾನ್ ರೂಪಾಂತರ ಸೋಂಕು ದೃಢವಾಗಿದೆ. ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯು 9 ಮಂದಿಗೆ ಹೊಸ ರೂಪಾಂತರದಿಂದ ಸೋಂಕು ತಾಗಿದೆ ಎಂದು ದೃಢಪಡಿಸಿದೆ ಎಂದು ಆರೋಗ್ಯ ಕಾರ್ಯದರ್ಶಿ ವೈಭವ್ ಗಲ್ರಿಯಾ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

CORONA-VIRUS.

ಇತ್ತೀಚೆಗೆ ಫಿನ್‍ಲ್ಯಾಂಡ್‍ನಿಂದ ಹಿಂದಿರುಗಿದ ಪುಣೆಯ ಮತ್ತೊಬ್ಬ ವ್ಯಕ್ತಿ ಕೂಡ ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ. ತಾಂಜಾನಿಯಾದಿಂದ ಆಗಮಿಸಿದ 37 ವರ್ಷದ ಸಂಪೂರ್ಣ ಲಸಿಕೆ ಪಡೆದ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡ ಹಿನ್ನೆಲೆ ದೆಹಲಿಯು ಭಾನುವಾರ ಮೊದಲ ಓಮಿಕ್ರಾನ್ ಪ್ರಕರಣ ವರದಿಯಾಗಿದೆ. ರಾಂಚಿಯ ನಿವಾಸಿಯಾಗಿರುವ ಸೋಂಕಿತರು ಡಿಸೆಂಬರ್ 2 ರಂದು ಕತಾರ್ ಏರ್‍ವೇಸ್ ವಿಮಾನದಲ್ಲಿ ತಾಂಜಾನಿಯಾದಿಂದ ದೋಹಾಗೆ ಮತ್ತು ಅಲ್ಲಿಂದ ದೆಹಲಿಗೆ ಪ್ರಯಾಣಿಸಿದ್ದರು ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *