ತುಮಕೂರು: ಮಣ್ಣಿನ ಮಗ ಅಂತಾ ನನ್ನ ತಂದೆ ನನಗೆ ನಾಮಕರಣ ಮಾಡಿಲ್ಲ. ಯಾರು ನಾಮಕರಣ ಮಾಡಿದ್ರೋ ನನಗೆ ಗೊತ್ತಿಲ್ಲ. ಯಾರು ಹೇಳಿದ್ರೋ, ಯಾವಾಗ ಹೇಳಿದ್ರೋ ಗೊತ್ತಿಲ್ಲ. ಜನರಿಗೆ ನನ್ನ ಮೇಲೆ ಪ್ರೀತಿ ಹಾಗೂ ಹೋರಾಟದ ಮೇಲೆ ನಂಬಿಕೆಯಿಂದ ಹಾಗೆ ಕರೆಯುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಬಳಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನನ್ನು ಮಣ್ಣಿನ ಮಗ ಅಂತ ಯಾರು ಮೊದಲು ಹೇಳಿದರು ಗೊತ್ತಿಲ್ಲ. ಅದನ್ನು ಹೇಳಿಕೊಂಡು ಬರುತ್ತಿದ್ದಾರೆ. ಯಾರು ಅಂತಾ ಹುಡುಕಲಿ. ಹೀಗೆ ಹೇಳಿ ಅಂತಾ ನಾನು ಯಾರಿಗಾದರೂ ಹೇಳಿದ್ದೀನಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ತವರಿನಲ್ಲಿ ಅತಿ ಹೆಚ್ಚು ವಿಕೆಟ್ – ದಾಖಲೆ ಬರೆದ ಅಜಾಜ್ ಪಟೇಲ್
ಎಂಎಲ್‍ಸಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅನಿಲ್‍ಕುಮಾರ್ ಅವರನ್ನು ಸ್ಪರ್ಧೆಗೆ ನಿಲ್ಲಿಸಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಮತದಾರರನ್ನು ಭೇಟಿ ಯಾಗುತ್ತಿದ್ದೇವೆ. 7 ಕ್ಷೇತ್ರಗಳಲ್ಲಿ ಮಾತ್ರ ನಾವು ಸ್ಪರ್ಧೆ ಮಾಡುತ್ತಿದ್ದೇವೆ. ಎಲ್ಲಾರು ಚುನಾವಣೆಯಲ್ಲಿ ಗೆಲ್ಲಲೇ ಬೇಕು. ಶಾಸಕರು, ಮಾಜಿ ಶಾಸಕರು, ಮುಖಂಡರು ಎಲ್ಲಾರು ಸೇರಿ ಕೆಲಸ ಮಾಡುತ್ತಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ವಿಜಯಪುರದಲ್ಲಿ 890 ವೋಟ್‍ಗಳಿಗೆ, ಗುಲ್ಬರ್ಗಾದಲ್ಲಿ ಸಾವಿರ ಚಿಲ್ಲರೆ ವೋಟ್‍ಗಳಿವೆ. ಬೀದರ್‍ನಲ್ಲಿ 490, ರಾಯಚೂರಿನಲ್ಲಿ 890 ವೋಟ್‍ಗಳಿವೆ. ಎಲ್ಲಾ ಕಡೆ ನಾವು ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗಿಲ್ಲ. ಇಲ್ಲಿ ಕಾಂಗ್ರೆಸ್, ಬಿಜೆಪಿಯವರ ಹೆಚ್ಚಿನ ಮತಗಳಿವೆ ಎಂದರು.
ವಿಧಾನಪರಿಷತ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂದು ಭಾನುವಾರ ತೀರ್ಮಾನ ಮಾಡುತ್ತೇವೆ. ತುಮಕೂರು ಜಿಲ್ಲೆಯ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಈ ಚುನಾವಣೆಯಲ್ಲಿ ಸ್ವಂತ ಶಕ್ತಿಯಿಂದ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಓಮಿಕ್ರಾನ್ ನಡುವೆಯೂ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ
ದೇವೇಗೌಡರ ಪ್ರಧಾನಿ ಮೋದಿ ಭೇಟಿ ವಿಚಾರವಾಗಿ ಮಾತನಾಡಿ. ಪ್ರಧಾನಿಗೆ ಇರುವಂತಾ ಕಷ್ಟಾನಾ ಒಂದು ಮಾತಲ್ಲಿ ಹೇಳೋಕೆ ಆಗಲ್ಲಾ. ಇಡೀ ಪ್ರಪಂಚವನ್ನು ಪೀಡಿಸುತ್ತಿರುವ ಕೊರೊನಾನ ಎದುರಿಸೋದು ಅಷ್ಟು ಸುಲಭ ಅಲ್ಲ. ನಮ್ಮ ದೇಶ ಚಿಕ್ಕ ದೇಶವಲ್ಲಾ, 130 ಕೋಟಿ ಜನಸಂಖ್ಯೆ ಇರುವ ದೇಶ. ಕೋವಿಡ್ ನಿರ್ವಹಣೆಯಲ್ಲಿ ಆರ್ಥಿಕ ಅವ್ಯವಹಾರ ಇದೆ ಎಂದು ಅಧಿಕೃತ ವಿರೋಧ ಪಕ್ಷ ಇದರ ಬಗ್ಗೆ ವ್ಯಾಖ್ಯಾನ ಮಾಡುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಲಂಚ ಪಡೆಯುತ್ತಿದ್ದ ಅಬಕಾರಿ ಡಿವೈಎಸ್‍ಪಿ ACB ಬಲೆಗೆ