ಚಿಕ್ಕಬಳ್ಳಾಪುರ: ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಈ ಬಾರಿ ಭಾರೀ ಮಳೆಯಾಗಿದ್ದು ಜಿಲ್ಲೆಯ ಬಹುತೇಕ ಕೆರೆ ಕುಂಟೆಗಳು ಮೈದುಂಬಿಕೊಂಡಿವೆ. ಈ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಜಿಲ್ಲೆಯ ಜಲಾಶಯ ಜಲಪಾತಗಳು ನಳ ನಳಿಸುತ್ತಿವೆ. ನದಿಗಳಂತೂ ಉಕ್ಕಿ ಭೋರ್ಗೆರೆದು ಹರಿಯುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಕೆರೆ ಸಹ 30 ವರ್ಷಗಳ ನಂತರ ಕೋಡಿ ಹರಿದಿದ್ದು ಜನರಿಗೆ ಸಂತಸ ತಂದಿದೆ. 426 ಎಕರೆ ವಿಶಾಲವಾದ ವಿಸ್ತೀರ್ಣ ಹೊಂದಿರುವ ಈ ಕೆರೆ ತಾಲೂಕಿನಲ್ಲಿ ದೊಡ್ಡದಾದ ಕೆರೆಗಳಲ್ಲಿ ಒಂದಾಗಿದೆ. ಗ್ರಾಮದ ರೈತರ ಜಮೀನುಗಳಿಗೆ ಬೆಳ್ಳೂಟಿ, ಚೌಡಸಂದ್ರ, ಮೇಲೂರು, ಭಕ್ತರಹಳ್ಳಿ, ಕಾಕಚೊಕ್ಕಂಡಹಳ್ಳಿ ಕೆರೆಗಳು ನೀರಾವರಿ ಪ್ರಮುಖ ಮೂಲಗಳಾಗಿದೆ. ಇದನ್ನೂ ಓದಿ: ನಾಯಿ ಮೂತ್ರ ವಿರ್ಸಜನೆ ಮಾಡಿದ್ದಕ್ಕೆ ವೃದ್ಧನಿಗೆ ಕಲ್ಲಿನಿಂದ ಹೊಡ್ದ
ಈ ಬಾರಿ ನದಿಗಳು ತುಂಬಿರುವುದರಿಂದ ರೈತರಿಗೆ 3-4 ವರ್ಷ ನೀರಿನ ಸಮಸ್ಯೆ ನೀಗಿದಂತಾಗಿದೆ. ಕೆರೆ ಕೋಡಿ ಹರಿದಿರುವುದರಿಂದ ಬೆಳ್ಳೂಟಿ ಚೌಡಸಂದ್ರ ಗ್ರಾಮದ ಕೆರೆ ಏರಿ ರಸ್ತೆ ಸಂಚಾರ ಬಂದ್ ಆಗಿದೆ. ಇನ್ನೂ ಈ ಕೆರೆಯ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡಲು ಆಕರ್ಷಕವಾಗಿದೆ. ಇದನ್ನೂ ಓದಿ: ಕೋಲಾರದಲ್ಲಿ ಉಕ್ಕಿ ಹರಿಯುತ್ತಿದೆ ಪಾಲಾರ್ ನದಿ – 19 ಗೇಟ್ ಓಪನ್
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಗ್ರಾಮ ಪಂಚಾಯತಿ ಸದಸ್ಯ ಸಂತೋಷ್, ಕೆರೆಯನ್ನು ನರೇಗಾ ಯೋಜನೆ ಯಡಿ ಹೊಳೆತ್ತಲಾಗಿತ್ತು. ಕೆರೆಗೆ ಸಂಪರ್ಕಿಸುವ ಕಾಲುವೆಗಳನ್ನು ಮರು ನಿರ್ಮಾಣ ಮಾಡಲಾಗಿತ್ತು. ಪರಿಣಾಮ ಚಿಕ್ಕಬಳ್ಳಾಪುರದ ಕಂದವಾರ, ಅಮಾನಿಗೋಪಾಲಕೃಷ್ಣ ಕೆರೆ, ಜಾತವಾರ, ಕೇಶವಾರ ಕೆರೆಗಳು ತುಂಬಿ ಬೆಳ್ಳೂಟಿ ಕರೆ ಸಹ ಕೋಡಿ ಹರಿದಿದೆ. ಜನರಿಗೆ ಬಹಳಷ್ಟು ಖುಷಿ ತಂದಿದೆ ಅಂತ ಸಂತಸ ಹಂಚಿಕೊಂಡಿದ್ದಾರೆ.