ಹೋಟೆಲ್ ಆಹಾರದಿಂದ ಕೆಲವರಿಗೆ ಕೊಬ್ಬು, ಆಸಿಡಿಟಿ, ಹೊಟ್ಟೆಯ ಸಮಸ್ಯೆಗಳನ್ನು ನೀವು ಅನುಭವಿಸುವುದು ಸಾಮಾನ್ಯವಾಗಿದೆ. ಇದಕ್ಕೆ ತಕ್ಕ ಪರಿಹಾರ ಎಂದರೆ ಮನೆಯಲ್ಲೇ ನಿಮಗೆ ಬೇಕಾದ ಸ್ವಾದಿಷ್ಟ ಖಾದ್ಯವನ್ನು ತಯಾರಿಸುವುದಾಗಿದೆ. ಮನೆಯಲ್ಲಿ ತಯಾರಿಸುವ ರೆಸಿಪಿ ಹೇಗಿರಬೇಕೆಂದರೆ ಸಮಯವನ್ನು ಉಳಿಸಿ ಎಲ್ಲರಿಂದಲೂ ನಿಮಗೆ ಮೆಚ್ಚುಗೆಯನ್ನು ನೀಡುವಂತೆ ಮಾಡುಬೇಕು. ಬಾಯಲ್ಲಿ ನೀರೂರಿಸುವ ಬದನೆಕಾಯಿ ಚಟ್ನಿ ರೊಟ್ಟಿ, ಚಪಾತಿ ದೋಸೆಗೆ ಸೂಪರ್ ಕಾಂಬಿನೇಷನ್ ಆಗಿದೆ.
ಬೇಕಾದ ಸಾಮಾಗ್ರಿಗಳು:
* ಬದನೆಕಾಯಿ – 4
* ನೆಲಗಡಲೆ ಹುರಿದದ್ದು – ಎರಡು ಚಮಚ
* ಹಸಿಮೆಣಸು – 2
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ತೆಂಗಿನಕಾಯಿ ತುರಿ – 1 ಕಪ್
* ಬೆಳ್ಳುಳ್ಳಿ – 2 ಎಸಳು
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ – 1 ಚಮಚ
* ಸಾಸಿವೆ – 1 ಚಮಚ
* ಕರಿಬೇವು – ಸ್ವಲ್ಪ ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
ಮಾಡುವ ವಿಧಾನ:
* ಮೊದಲಿಗೆ ಬದನೆಕಾಯಿ ಮತ್ತು ಬೆಳ್ಳುಳ್ಳಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
* ಬೇಯಿಸಿದ ಬದನೆ, ಬೆಳ್ಳುಳ್ಳಿಯೊಂದಿಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹುರಿದ ನೆಲಗಡಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ತೆಂಗಿನ ಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
* ಬದನೆ ಬೇಯಿಸಿದ ನೀರನ್ನು ರುಬ್ಬುವಾಗ ಬಳಸಿಕೊಳ್ಳಿ.
*ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಇದಕ್ಕೆ ಸಾಸಿವೆಯನ್ನು ಹಾಕಿ. ಇದು ಸಿಡಿಯುತ್ತಿದ್ದಂತೆ ಕರಿಬೇವು ಇದಕ್ಕೆ ಸೇರಿಸಿ. ಚಟ್ನಿಗೆ ಒಗ್ಗರಣೆಯನ್ನು ಮಾಡಿಕೊಂಡು ಮೇಲೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಬೇಯಿಸಿದರೆ ರುಚಿಯಾದ ಬದನೆಕಾಯಿ ಚಟ್ನಿ ಸವಿಯಲು ಸಿದ್ದವಾಗುತ್ತದೆ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ