ಮೂರು ದಿನದಲ್ಲಿ ಜೆಡಿಎಸ್‌ಗೆ ಅಧಿಕೃತವಾಗಿ ರಾಜೀನಾಮೆ: ಸಂದೇಶ್‌ ನಾಗರಾಜ್‌

Public TV
1 Min Read
SANDESH NAGARAJU

ಮೈಸೂರು: ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನನ್ನ ಅಗತ್ಯ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಇನ್ನು ಮೂರು ದಿನದಲ್ಲಿ ಜೆಡಿಎಸ್‌ಗೆ ಅಧಿಕೃತವಾಗಿ ರಾಜೀನಾಮೆ ನೀಡುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ತಿಳಿಸಿದರು.

jds

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಬಿಜೆಪಿ ಕಚೇರಿಯಲ್ಲೆ ಬಿಜೆಪಿ ಸೇರ್ಪಡೆಯಾಗುತ್ತೇನೆ. ಬಿಜೆಪಿ ಸೇರುವ ದಿನ ನಾನು ಯಾಕೆ ಜೆಡಿಎಸ್ ಬಿಟ್ಟೆ ಎಂಬುದನ್ನು ಸುದ್ದಿಗೋಷ್ಠಿ ಮಾಡಿ ವಿವರಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

ನನ್ನ ಅಗತ್ಯ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇದ್ದಂತಿಲ್ಲ. ಅವರ ಮಾತು, ನಡೆಯಲ್ಲಿ ಅದು ಗೊತ್ತಾಗುತ್ತಿದೆ. ಅಗತ್ಯವಿಲ್ಲದ ಕಡೆ ನಾನು ಯಾಕೆ ಇರಬೇಕು? ಕಳೆದ ಮೂರು ವರ್ಷಗಳಿಂದ ನಾನು ಮಾನಸಿಕವಾಗಿ ಬಿಜೆಪಿಯಲ್ಲೆ ಇದ್ದೇನೆ. ದೈಹಿಕವಾಗಿ ಅಷ್ಟೆ ಜೆಡಿಎಸ್‌ನಲ್ಲಿದ್ದೆ. ವಿಧಾನ ಪರಿಷತ್ ಒಳಗೂ ನಾನು ಬಿಜೆಪಿ ಪರವೇ ಬಿಲ್‌ಗಳಿಗೆ ಕೈ ಎತ್ತಿದ್ದೇನೆ. ಮೂರು ವರ್ಷದಿಂದ ನಾನು ಜೆಡಿಎಸ್ ನಾಯಕರ ಸಂರ್ಪಕದಲ್ಲಿ ಇಲ್ಲ. ನನಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ: ಓವೈಸಿ

h.d.kumaraswamy

ಜೆಡಿಎಸ್‌ನಿಂದ ಶಾಸಕ ಜಿ.ಟಿ.ದೇವೇಗೌಡ ದೂರ ಸರಿಯುತ್ತಿರುವ ಬೆನ್ನಲ್ಲೇ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಪಕ್ಷಕ್ಕೆ ಗುಡ್ ಬೈ ಹೇಳಲು ಮೂಹರ್ತ ನಿಗದಿ ಮಾಡಿದ್ದಾರೆ. ಇನ್ನೂ ಮೂರು ದಿನದಲ್ಲಿ ಸಂದೇಶ್ ನಾಗರಾಜ್ ಜೆಡಿಎಸ್‌ಗೆ ಅಧಿಕೃತವಾಗಿ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *