ಹಸಿರು ಪಟಾಕಿ ದರ ಭಾರೀ ಏರಿಕೆ

Public TV
1 Min Read
FIRECRACKERS

ಬೆಂಗಳೂರು: ದೀಪಾವಳಿಗೆ ಹಸಿರು ಪಟಾಕಿ ಬಳಕೆಗೆ ಮಾತ್ರ ಸರ್ಕಾರ ಅನುಮತಿ ನೀಡಿದ್ದು ದರ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.20-30 ರಷ್ಟು ದರ ಏರಿಕೆಯಾಗಿದೆ. ಈ ಮೂಲಕ ಪಟಾಕಿ ಪ್ರಿಯರಿಗೆ ಬಿಸಿ ತಟ್ಟಿದೆ.

ಎಷ್ಟು ಏರಿಕೆಯಾಗಿದೆ?
ಫ್ಲವರ್ ಪಾಟ್ಸ್ 150 ರೂ. ನಿಂದ 180 ರೂ.ಗೆ ಏರಿಕೆಯಾಗಿದ್ದರೆ ಭೂಚಕ್ರ 130 ರೂ. ನಿಂದ 155 ರೂ.ವರೆಗೆ ಏರಿಕೆಯಾಗಿದೆ. 300 ರೂ.ಗೆ ಸಿಗುತ್ತಿದ್ದ ಸ್ಕೈ ಶಾಟ್ಸ್ 450 ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಗ್ರೀನ್ ಬಾಂಬ್ ಬಾಕ್ಸ್‌ಗೆ 160 ರೂ. ಇದ್ದರೆ ಈಗ 185 ರೂ.ಗೆ ಏರಿಕೆಯಾಗಿದೆ. 500 ರೂ.ಗೆ ಸಿಗುತ್ತಿದ್ದ ಪಟಾಕಿ ಗಿಫ್ಟ್‌ ಬಾಕ್ಸ್‌ 700 ರೂ.ಗೆ ಏರಿಕೆಯಾಗಿದೆ.

pataki 3

ಸುಪ್ರೀಂ ಆದೇಶ ಏನು?
ಹಸಿರು ಪಟಾಕಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪರವನಾಗಿದಾರರು ಸಂಬಂಧ ಪಟ್ಟ ಇಲಾಖೆ/ಪ್ರಾಧಿಕಾರ ನೀಡಿರುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಅಂಗಡಿಗಳನ್ನು ಇಡಬೇಕು. ಒಂದು ಪಟಾಕಿ ಮಳಿಗೆಯಿಂದ ಮತ್ತೊಂದು ಪಟಾಕಿ ಮಳಿಗೆ 6 ಮೀಟರ್ ಅಂತರ ಇರಬೇಕು . ಪಟಾಕಿ ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಸಾರ್ವಜನಿಕ ವಸತಿ ಸ್ಥಳಗಳಲ್ಲಿ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಸಂಬಂಧ ಪಟ್ಟ ಇಲಾಖೆ ಮತ್ತು ಪ್ರಾಧಿಕಾರದ ಅನುಮತಿ ಪಡೆಯಬೇಕು. ಇದನ್ನೂ ಓದಿ: ತಾರೆಯರು ಒಗ್ಗಟ್ಟಾಗಿರೋಣ: ಎಲ್ಲ ನಟರಿರುವ ಫೋಟೊ ಹಂಚಿಕೊಂಡು ಜಗ್ಗೇಶ್‌ ಕರೆ 

Supreme medium

ಪ್ರತಿಯೊಂದು ಮಳಿಗೆಗಳಲ್ಲಿ ಪರವಾನಗಿಯನ್ನು ಪ್ರದರ್ಶಿಸುವಂತೆ ಅಂಟಿಸಬೇಕು. ಹಸಿರು ಪಟಾಕಿ ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ಸ್ಯಾನಿಟೈಸ್‌ ಮಾಡಬೇಕು. ಮಳಿಗೆಳ ಬಳಿ ಮತ್ತು ಜನ 6 ಅಡಿ ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಧಿಕಾರ, ಪಾಲಿಕೆ ಸರ್ಕಾರ ಹೊರಡಿಸಿರುವ ನಿಯಮಗಳನ್ನ ಪಾಲಿಸಬೇಕು. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

Share This Article
Leave a Comment

Leave a Reply

Your email address will not be published. Required fields are marked *