ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

Public TV
2 Min Read
puneeth rajkumar 2

ಬೆಂಗಳೂರು: ಪವರ್ ಸ್ಟಾರ್, ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ನಮ್ಮನೆಲ್ಲ ಅಗಲಿ ಈಗಾಗಲೇ 5ದಿನ ಕಳೆದಿದೆ. ಆದರೆ ಈ ವೇಳೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿರುವ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ.

 puneeth rajkumar publictv

ಹೃದಯಸ್ತಂಭನದಿಂದ ಯುವರತ್ನ ಪುನೀತ್ ಅವರ ಸಾವಿನ ಸುದ್ದಿ ತಿಳೀಯುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಪ್ಪುನನ್ನು ನೋಡಲು ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು. ಅಪ್ಪು ಅಂತಿಮ ದರ್ಶನದ ವೇಳೆ ಅಪ್ಪುನನ್ನು ನೋಡಲು ಅಭಿಮಾನಿಗಳಿಗೆ ಅವಕಾಶವನ್ನು ಕಲ್ಪಸಿಕೊಡಲಾಗಿತ್ತು. ಈ ವೇಳೆ ಅಭಿಮಾನಿಗಳು ಪಾರ್ಥಿವ ಶರೀರವನ್ನು ನೋಡಲು ಚಪ್ಪಲಿ ಹಾಕುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ಚಪ್ಪಲಿ ತೆಗೆದ ಬರಿಗಾಲಿನಲ್ಲಿ ನಡೆದು ಪಾರ್ಥಿವ ಶರೀರ ನೋಡಲು ಸಾಗಿದ್ದಾರೆ. ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಲಕ್ಷಾಂತರ ಜೋಡಿ ಚಪ್ಪಲಿ ಕ್ರೀಡಾಂಗಣದಲ್ಲಿ ಬಿದ್ದಿತ್ತು. ಬೆಂಗಳೂರು ಪಾಲಿಕೆ (BBMP) ಸ್ವಚ್ಛತಾ ಸಿಬ್ಬಂದಿ ತೆರವು ಮಾಡಿದ್ದಾರೆ.

ಅಭಿಮಾನಿಗಳು ಚಪ್ಪಲಿ ತೆಗೆದು ಪುನೀತ್ ಅವರ ಪಾರ್ಥಿವ ಶರೀರಕ್ಕೆ ನಮಸ್ಕರಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರು ಹಂಚಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‍ವುಡ್ ಮಾತ್ರವಲ್ಲದೆ, ಟಾಲಿವುಡ್, ಬಾಲಿವುಡ್ ಕಲಾವಿದರು ಸೇರಿದಂತೆ ಬೇರೆ ಭಾಷೆಯಲ್ಲೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಕೀರ್ತಿ ಅಪ್ಪು ಅವರಿಗೆ ಸಲ್ಲುತ್ತದೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

puneeth rajkumar 1

ಪುನೀತ್ ರಾಜ್‍ಕುಮಾರ್ ಅವರು ಸಿನಿಮಾ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ತಮ್ಮ ಸಾವಿನ ನಂತರವೂ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆಯನ್ನು ಮೆರೆದಿದ್ದಾರೆ. ಅಪ್ಪು ಅವರನ್ನು ಕಳೆದುಕೊಂಡಿರುವ ಸ್ಯಾಂಡಲ್‍ವುಡ್, ಕುಟುಂಬ , ಅಭಿಮಾನಿಗಳು, ಕಲಾವಿದರಿಗೆ ಬರಸಿಡಲು ಬಡಿದಂತಾಗಿದೆ. ಇಂದು ಕುಟುಂಬಸ್ಥರು ಹಾಲು, ತುಪ್ಪಕಾರ್ಯವನ್ನು ನೆರವೇರಿಸಿದ್ದಾರೆ. ನಾಳೆ ಅಭಿಮಾನಿಗಳಿಗೆ ಪುನೀತ್ ಅವರ ಸಮಾದಿಯ ದರ್ಶನವನ್ನು ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.  ಇದನ್ನೂ ಓದಿ:  ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ

Share This Article
Leave a Comment

Leave a Reply

Your email address will not be published. Required fields are marked *