ನವದೆಹಲಿ: 2.2 ಮಿಲಿಯನ್‌ಗಿಂತಲೂ (22 ಲಕ್ಷ) ಹೆಚ್ಚು ಭಾರತೀಯರ ಖಾತೆಗಳನ್ನು ವಾಟ್ಸಪ್ ನಿಷೇಧಿಸಿದೆ. ಸೆಪ್ಟೆಂಬರ್‌ನಲ್ಲಿ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಿಂದ 560 ಕುಂದುಕೊರತೆ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ಅದರ ವರದಿ ತಿಳಿಸಿದೆ.
ವಾಟ್ಸಪ್ ಈಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ, ಸೆಪ್ಟೆಂಬರ್‌ನಲ್ಲಿ 2,209,000 ಭಾರತೀಯರ ಖಾತೆಗಳನ್ನು ತನ್ನ ವೇದಿಕೆಯಿಂದ ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅರೆಸ್ಟ್
ಭಾರತೀಯ ಖಾತೆಯನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ ಎಂದು ವಾಟ್ಸಪ್ ತಿಳಿಸಿದೆ.
“ನಿಂದನೆಯನ್ನು ತಡೆಗಟ್ಟುವಲ್ಲಿ ವಾಟ್ಸಪ್ ಉದ್ಯಮದ ಮುಂಚೂಣಿಯಲ್ಲಿದೆ. ನಾವು ಕೃತಕ ಬುದ್ದಿಮತ್ತೆ ಮತ್ತು ಇತರೆ ಅತ್ಯಾಧುನಿಕ ತಂತ್ರಜ್ಞಾನ, ದತ್ತಾಂಶ ವಿಜ್ಞಾನಿಗಳು ಮತ್ತು ತಜ್ಞರು ಹಾಗೂ ಇತರೆ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ. ವಾಟ್ಸಪ್ ವೇದಿಕೆಯಲ್ಲಿ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ವಾಟ್ಸಪ್ ವಕ್ತಾರ ಹೇಳಿದ್ದಾರೆ. ಇದನ್ನೂ ಓದಿ: ಅಶ್ಲೀಲ ಸಿನಿಮಾಗಳ ವಿವಾದದ ಬಳಿಕ ಟ್ವಿಟ್ಟರ್, ಇನ್‍ಸ್ಟಾ ಡಿಲೀಟ್ ಮಾಡಿದ ರಾಜ್ ಕುಂದ್ರಾ
ಫೇಸ್‌ಬುಕ್ ಒಡೆತನದ ಕಂಪೆನಿಯು ಶೇ. 95ಕ್ಕಿಂತ ಹೆಚ್ಚು ನಿಷೇಧಕ್ಕೆ ಒಳಪಟ್ಟ ಸ್ವಯಂಚಾಲಿತ ಅಥವಾ ಬಲ್ಕ್ ಸಂದೇಶಗಳು ಅನಧಿಕೃತದಿಂದ ಕೂಡಿದ್ದವು ಎಂದು ಈ ಹಿಂದೆ ಹೇಳುತ್ತು. ಈ ಹಿನ್ನೆಲೆಯಲ್ಲಿ ವಾಟ್ಸಪ್ ತನ್ನ ವೇದಿಕೆಯಲ್ಲಿ ನಿಂದನೆ ತಡೆಗಟ್ಟಲು ತಾನು ನಿಷೇಧಿಸುತ್ತಿರುವ ಜಾಗತಿಕ ಸರಾಸರಿ ಖಾತೆಗಳ ಸಂಖ್ಯೆಯು ತಿಂಗಳಿಗೆ ಸುಮಾರು 8 ಮಿಲಿಯನ್ ಎಂದು ವಾಟ್ಸಪ್ ಹೇಳಿದೆ.