ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಯ ಸ್ಥಾಪಕ ಎಲೋನ್ ಮಸ್ಕ್ ಆಸ್ತಿ ಈಗ ಪಾಕಿಸ್ತಾನದ ಜಿಡಿಪಿ ಮೌಲ್ಯಕ್ಕಿಂತ ಅಧಿಕವಾಗಿದೆ. ಮಸ್ಕ್ ಆಸ್ತಿ ಮೌಲ್ಯ 300 ಶತಕೋಟಿ ಡಾಲರ್ (22.50 ಲಕ್ಷ ಕೋಟಿ ರೂ.) ಮೀರಿದ್ದು, ಪಾಕಿಸ್ತಾನದ 280 ಶತಕೋಟಿ ರೂ. ಡಾಲರ್ ಜಿಡಿಪಿಗಿಂತ ಹೆಚ್ಚಾಗಿದೆ.
22 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದ ಒಂದು ವರ್ಷದ ಒಟ್ಟು ಉತ್ಪಾದನೆಗಿಂತ ಮಸ್ಕ್ ಆಸ್ತಿಯೇ ಹೆಚ್ಚಾಗಿದ್ದು, ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಂಬ ಹಿರಿಮೆ ಹೊಂದಿರುವ ಮಸ್ಕ್ 300 ಶತಕೋಟಿ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ಸೂಪರ್ ಟೆಕ್ನಾಲಜಿ ಅಭಿವೃದ್ಧಿ ಪಡಿಸಿದವರಿಗೆ 729 ಕೋಟಿ ಬಹುಮಾನ ಘೋಷಿಸಿದ ಮಸ್ಕ್
ಬ್ಲೂಮ್‍ಬರ್ಗ್ ಬಿಲಿಯನೇರ್ ಇಂಡೆಕ್ಸ್‍ನಲ್ಲಿ ಮಸ್ಕ್ ಆಸ್ತಿ 311 ಶತಕೋಟಿ ಡಾಲರ್ ಗೆ ಏರಿದೆ. ಈ ಮೂಲಕ ಮಸ್ಕ್ 300 ಶತಕೋಟಿ ಡಾಲರ್ ಕ್ಲಬ್ ದಾಟಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾಗೆ XUV 700 ಕಾರ್ ಗಿಫ್ಟ್ ನೀಡಿದ ಮಹೀಂದ್ರಾ
ಮಸ್ಕ್ ಅವರು ಟೆಸ್ಲಾ ಸಹಿತ ಹಲವು ಎಲೆಕ್ಟ್ರಿಕ್ ವಾಹನ ಉದ್ಯಮ ಸೇರಿದಂತೆ ಹಲವು ಕಂಪನಿಗಳ ಒಡೆಯ. ಅವರ ಕಂಪನಿಯ ಷೇರು ಮೌಲ್ಯಗಳು ಭಾರೀ ಏರಿಕೆ ಕಂಡಿದ್ದರಿಂದ ಹಾಗೂ 1 ಲಕ್ಷದಷ್ಟು ಟೆಸ್ಲಾ ಎಲೆಕ್ಟ್ರಿಕ್ ವಾಹನಗಳು ಒಮ್ಮೆಲೆ ಮಾರಾಟವಾದ ಬೆನ್ನಲ್ಲೇ ಅವರ ಆಸ್ತಿ ಮೌಲ್ಯ 292 ಶತಕೋಟಿ ಡಾಲರ್ ಗೆ (22.50 ಲಕ್ಷ ಕೋಟಿ ರೂ.) ಏರಿಕೆ ಕಂಡಿದೆ. ಇದನ್ನೂ ಓದಿ: ಭೀಕರ ಅಪಘಾತ-11 ಮಂದಿ ಸಾವು, ನಾಲ್ವರಿಗೆ ಗಾಯ
ಬ್ಲೂಮ್‍ಬರ್ಗ್ ಇಂಡೆಕ್ಸ್ ನ ವರದಿಯ ಪ್ರಕಾರ ಶ್ರೀಮಂತರ ಪಟ್ಟಿಯಲ್ಲಿ ಮಸ್ಕ್ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಜೆಫ್ ಬೆಜೋಸ್ 14.62 ಲಕ್ಷ ಕೋಟಿ ರೂ. ಬೆರ್ನಾರ್ಡ್ ಅರ್ನಾಲ್ಟ್ 12.52 ಲಕ್ಷ ಕೋಟಿ ರೂ. ಆಗಿದೆ. ಈ ಪಟ್ಟಿಯಲ್ಲಿ ಭಾರತದ ಉದ್ಯಮಿ ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ 71.2 ಲಕ್ಷ ಕೋಟಿ ರೂ. ನೊಂದಿಗೆ 11ನೇ ಸ್ಥಾನ ಪಡೆದರೆ, ಇನ್ನೋರ್ವ ಉದ್ಯಮಿ ಗೌತಮ್ ಅದಾನಿ 5.77 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ 13ನೇ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಟೆಸ್ಲಾ ಕಂಪನಿಯ 1 ಷೇರಿನ ಬೆಲೆ 400 ಡಾಲರ್(ಅಂದಾಜು 29,971 ರೂ.) ಇದ್ದರೆ ಈ ವರ್ಷದ ಅಕ್ಟೋಬರ್ 29ರ ವೇಳೆಗೆ ಇದು 1,114 ಡಾಲರ್(ಅಂದಾಜು 83,470 ರೂ.)ಗೆ ಏರಿಕೆಯಾಗಿದೆ.