ಬೆಂಗಳೂರು: ಕೊನೆಗೂ ತಂದೆ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನವನ್ನು ಪುತ್ರಿ ಧೃತಿ ಪಡೆದರು.
ಪುನೀತ್ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಧೃತಿ ಕೂಡಲೇ ಅಮೆರಿಕಾದಿಂದ ತವರಿನತ್ತ ಹೊರಟಿದ್ದಾರೆ. ವಿಶೇಷ ವಿಮಾನದ ಮೂಲಕ ಇಂದು ಮಧ್ಯಾಹ್ನ ದೆಹಲಿಗೆ ಬಂದಿಳಿದ ಧೃತಿ ಅಲ್ಲಿಂದ ಮತ್ತೆ ವಿಶೇಷ ವಿಮಾನದ ಮೂಲಕ ಸಂಜೆ 4.15ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ
ಅಲ್ಲಿಂದ ಪೊಲೀಸ್ ಭದ್ರತೆಯಲ್ಲಿಯೇ ನೇರವಾಗಿ ತಮ್ಮ ನಿವಾಸ ಸದಾಶಿವ ನಗರಕ್ಕೆ ತೆರಳಿ ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಬಂದು ಅಪ್ಪನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಾಜ್‍ಕುಮಾರ್ ಮಕ್ಕಳ ಜೊತೆ ನಾನು ಆ್ಯಕ್ಟಿಂಗ್ ಮಾಡ್ಬೇಕುಂತ ಅಮ್ಮನಿಗೆ ಆಸೆ ಇತ್ತು: ರಚಿತಾ ರಾಮ್
ಈಗಾಗಲೇ ಕತ್ತಲಾವರಿಸಿದ್ದರಿಂದ ಪುನೀತ್ ಅಂತ್ಯ ಕ್ರಿಯೆ ನಾಳೆ ನಡೆಯಲಿದೆ. ಈ ಸಂಬಂಧ ಮಾತನಾಡಿದ ಸಿಎಂ, 5.30 ನಂತರ ಅಂತ್ಯಕ್ರಿಯೆ ಮಾಡಲು ಸಾಧ್ಯವಿಲ್ಲ. ಯಾಕಂದರೆ ಜಾಗ ತುಂಬಾ ಕಿರಿದಾಗಿದ್ದು, ಕತ್ತಲಾದರೆ ಕಷ್ಟ ಸಾಧ್ಯ. ಹೀಗಾಗಿ ಪುನೀತ್ ಅವರ ಸಹೋದರ ಶಿವರಾಜ್‍ಕುಮಾರ್ ಅವರ ಬಳಿ ಹಾಗೂ ಕುಟುಂಬದ ಜೊತೆಗೆ ಚರ್ಚೆ ಮಾಡಿ ನಾಳೆ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಮಾಡಲಾಗಿದೆ. ನಾಳೆವರೆಗೂ ಅಭಿಮಾನಿಗಳಿಗೆ ಬರಲು ಅವಕಾಶ ನೀಡಲಾಗಿದೆ. ದಯವಿಟ್ಟು ನೀವು ಸಹಕರಿಸಿ ಎಂದು ಮನವಿ ಮಾಡಿಕೊಂಡರು.