ಚಿಕ್ಕಬಳ್ಳಾಪುರ ಆಸ್ಪತ್ರೆ ಕಟ್ಟಡಕ್ಕೆ ಕಾದಿದೆ ಬಹುದೊಡ್ಡ ಅಪಾಯ-ಉರುಳಲಿದೆಯಾ ಜಿಲ್ಲಾಸ್ಪತ್ರೆ..!

Public TV
3 Min Read
Chikkaballapur hospital

– ಅಧಿಕಾರಿಗಳೇ ಅದಷ್ಟು ಬೇಗ ದಯಮಾಡಿ ಎಚ್ಚೆತ್ತುಕೊಳ್ಳಿ

ಚಿಕ್ಕಬಳ್ಳಾಪುರ: ಬೆಂಗಳೂರಿಲ್ಲಿ ದಿನಕ್ಕೊಂದು ಕಟ್ಟಡ ಕುಸಿತ ಪ್ರಕರಣಗಳು ನಮ್ಮ ಕಣ್ಣು ಮುಂದೆಯೇ ಇವೆ. ಮುಂದೊಂದು ದಿನ ಅಂತಹ ಘಟನೆಗೆ ಚಿಕ್ಕಬಳ್ಳಾಪುರವೂ ಸಾಕ್ಷಿಯಾಗಲಿದೆ ಎಂಬ ಆತಂಕ ಶುರುವಾಗಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಎಂಬಂತೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಮೂರು ಅಂತಸ್ತಿನ ಬೃಹತ್ ಕಟ್ಟಡಕ್ಕೆ ಜಲಕಂಟಕ ಎಂಬಂತೆ ಬೃಹತ್ ಕಟ್ಟಡದ ಪಿಲ್ಲರ್‌ಗಳಿಂದ ಅಂರ್ತಜಲ ಉಕ್ಕಿ ಬರುತ್ತಿದೆ.

Chikkaballapur hospital 6

Public Tv Exclusive medium ಆಸ್ಪತ್ರೆಯ ಕಟ್ಟಡ ಸಮರ್ಪಕ ನಿರ್ವಹಣೆ ಮಾಡದ ಅಧಿಕಾರಿಗಳ ಬೇಜಾವಾಬ್ದಾರಿಗೆ ಮೊದಲ ಅಂತಸ್ಥಿನಿಂದ ಜಲಪಾತದಂತೆ ಪಿಲ್ಲರ್‌ಗಳಿಂದ ನೀರು ಧುಮ್ಮುಕ್ಕುತ್ತಿದ್ದು, ಕಟ್ಟಡ ಯಾವಾಗ ಬೇಕಾದರೂ ಕುಸಿಯುವ ಭಯ ಹುಟ್ಟಿಸುವಂತಿದೆ. ಆರೋಗ್ಯ ಸಚಿವರ ತವರಲ್ಲೇ ಇದೆಂಥಹ ಅವ್ಯವಸ್ಥತೆ ಅನ್ನೋ ಹಾಗೆ ಅಧಿಕಾರಿಗಳ ಕಾರ್ಯವೈಖರಿಯನ್ನ ಪ್ರಶ್ನೆ ಮಾಡುವಂ-ತಿದೆ.

Chikkaballapur hospital 3

ಸಮಸ್ಯೆ ಏನು, ಯಾಕೆ ಆತಂಕ..?
ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಹಾಗೂ ಕಂದವಾರ ಕೆರೆಯಲ್ಲಿ ಎಚ್‍ಎನ್ ವ್ಯಾಲಿ ನೀರಿನಿಂದ ತುಂಬಿ ತುಳುಕುತ್ತಿರೋದ್ರಿಂದ ನಗರದಲ್ಲಿ ಅಂರ್ತಜಲ ಮಟ್ಟ ಭಾರೀ ಏರಿಕೆ ಆಗಿದೆ. ನಗರದ ಹಲವು ನೆಲಮಹಡಿ ಕಟ್ಟಡಗಳಲ್ಲಿ ಅಂರ್ತಜಲ ಉಕ್ಕುತ್ತಿದ್ದು, ಸೆಲ್ಲಾರ್‌ಗಗಳು ಸ್ವಿಮ್ಮಿಂಗ್ ಪೂಲ್‍ಗಳಾಗಿವೆ. ಅದರಲ್ಲೂ ಈ ಜಿಲ್ಲಾಸ್ಪತ್ರೆ ಕಟ್ಟಡವೂ ಒಂದಾಗಿದ್ದು, ಆಸಲಿಗೆ ಈ ಮುಂಚೆ ತಿಮ್ಮೇಗೌಡ ಕೆರೆಯಾಗಿದ್ದ ಈ ಜಾಗದಲ್ಲಿ ಜಿಲ್ಲಾಸ್ಪತ್ರೆಯನ್ನ ಸಹ ನಿರ್ಮಾಣ ಮಾಡಿರೋದು. ಹೀಗಾಗಿ ಸಹಜ ಎಂಬಂತೆ ಈಗ ಅಂರ್ತಜಲ ಉಕ್ಕಿ ಹರಿದು ಮೇಲೆ ಬರ್ತಿದ್ದು, ಇದು ಕಟ್ಟಡಕ್ಕೆ ಅಪಾಯವನ್ನುಂಟು ಮಾಡುವ ಭಯ ಕಾಡುತ್ತಿದೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

Chikkaballapur hospital 1 1
ಅಧಿಕಾರಿಗಳ ನಿರ್ವಹಣೆ ಕೊರತೆ ಮತ್ತಷ್ಟು ಅಪಾಯ: ಅಂರ್ತಜಲ ಉಕ್ಕಿ ಬರ್ತಿರೋದು ಒಂದು ಕಡೆ ಪ್ರಕೃತಿ ಸಹಜ ಮೂಲಭೂತ ಸಮಸ್ಯೆ ಆದರೆ ಮತ್ತೊಂದೆಡೆ ಅಧಿಕಾರಿಗಳ ಬೇಜವಾಬ್ದಾರಿ ನಿರ್ವಹಣೆ ಕೊರತೆಯಿಂದ ಇಡೀ ಕಟ್ಟಡ ಅದಷ್ಟು ಬೇಗ ಧರೆಗುರುಳೋ ಅಪಾಯದ ಅಂಚಿಗೆ ಸಾಗುತ್ತಿದೆ. ಸರಿಸುಮಾರು 30 ಕೋಟಿ ಖರ್ಚು ಮಾಡಿ 7-8 ವರ್ಷಗಳ ಹಿಂದೆ ಕಟ್ಟಿದ ಕಟ್ಟಡ ಈಗ ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗಿ ಹೋಗುತ್ತಿದೆ. ನೆಲಮಹಡಿಯಲ್ಲಿನ ಪಿಲ್ಲರ್‌ಗಳು ಹಾಗೂ ಗೋಡೆಗಳು ಸಂದುಗಳಿಂದ ನೀರು ಉಕ್ಕಿ ಹರಿದುಬರುತ್ತಿದೆ. ಎಲ್ಲಂದರಲ್ಲಿ ನೀರು ಜಿನುಗುತ್ತಿದ್ದು, ಗೋಡೆಗಳು ಪಿಲ್ಲರ್‌ಗಳು ನೆಂದು ನೆಂದು ಹಾಳಾಗುತ್ತಿವೆ. ಸಾಲದು ಅಂತ ಮೊದಲ ಮಹಡಿಯಲ್ಲಿ ಸಮರ್ಪಕ ಡ್ರೈನೈಜ್ ವ್ಯವಸ್ಥೆಯನ್ನ ನಿರ್ವಹಣೆ ಮಾಡದೆ ಶೌಚಾಲಯ ಸೇರಿ ಇತರೆ ದಿನಬಳಕೆ ತ್ಯಾಜ್ಯ ನೀರೆಲ್ಲ ಪಿಲ್ಲರ್‌ಗಳ ಮೂಲಕ ನಿರಂತರವಾಗಿ ಇಳಿದುಬರುತ್ತಿದೆ. ಥೇಟ್ ಜಲಪತಾದಂತೆ ಪಿಲ್ಲರ್‌ಗಳ ಮೂಲಕ ನೆಲಮಹಡಿಗೆ ಮೊದಲ ಮಹಡಿಗಗಳ ಶೌಚಾಲಯ ಹಾಗೂ ಇತರೆ ತ್ಯಾಜ್ಯ ನೀರು ಹರಿದುಬರ್ತಿದೆ. ಪರಿಣಾಮ ನೆಲಮಹಡಿಯಲ್ಲಿನ ಪಿಲ್ಲರ್ ಒಂದು ಕೈಯಲ್ಲಿ ಸಿಮೆಂಟ್ ಕಿತ್ತರೆ ಕೈಗೆ ಬರುವ ಹಾಗೆ ಇದೆ. ಹೀಗಾಗಿ ಪಿಲ್ಲರ್‌ಗಗಳು ತಮ್ಮ ಶಕ್ತಿ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ. ಬಹುತೇಕ ಪಿಲ್ಲರ್‌ಗಳ ಅವಸಾನದ ಅಂಚಿಗೆ ಸಾಗುತ್ತಿದ್ದು,ನೆಲಮಹಡಿಯ ಹಲವು ಕೊಠಡಿಗಳು ಸ್ವಿಮ್ಮಿಂಗ್ ಪೂಲ್ ಗಳಾಗಿವೆ. ಕೊಠಡಿಗಳೆಲ್ಲಿರೋ ವೈದ್ಯಕೀಯ ಉಪಕರಣಗಳು ತುಕ್ಕು ಹಿಡಿಯುತ್ತಿವೆ. ಇದು ಹೀಗೆ ಮುಂದುವರೆದರೇ ಮುಂದೊಂದು ದಿನ ಕಟ್ಟಡ ಏನಾಗುತ್ತೋ ಅನ್ನೋ ಆತಂಕ ಕಾಡುತ್ತಿದೆ. ಇದನ್ನೂ ಓದಿ:  ಕಾಲು ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

Chikkaballapur hospital 5

ಅಧಿಕಾರಿಗಳೇ ದಯಮಾಡಿ ಎಚ್ಚೆತ್ತುಕೊಳ್ಳಿ..! ಆಪತ್ತಿನಿಂದ ಪಾರಾಗಿ..! ಕೆರೆ ಇದ್ದ ಜಾಗದಲ್ಲಿ ಜಿಲ್ಲಾಸ್ಪತ್ರೆ ಕಟ್ಟಿರುವುದರಿಂದ ಅಂರ್ತಜಲ ಹೆಚ್ಚಾಗಿ ಪಿಲ್ಲರ್‌ಗಳು-ಗೋಡೆಗಳ ಸಂದುಗಳಿಂದ ನೀರು ಉಕ್ಕೋದು ಸಹಜ ಸಮಸ್ಯೆಯಾದರೂ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ, ಮತ್ತೊಂದೆಡೆ ಮೊದಲ ಮಹಡಿಯಿಂದ ಪಿಲ್ಲರ್‍ಗಳ ಮೂಲಕ ಇಳಿದು ಬರ್ತಿರೋ ತ್ಯಾಜ್ಯ ನೀರು ಭಾರೀ ಡೆಂಜರ್ ಎಂಬಂತಿದ್ದು, ಪಿಲ್ಲರ್‌ಗಳನ್ನೇ ಕರಗಿಸಿ ಅಲ್ಲಾಡಿಸಬಿಡಲಿದೆ. ಬಹುದೊಡ್ಡ ಪಿಲ್ಲರ್ ನಿರಂತರ ನೀರಿನಿಂದ ನೆಂದು ಸಿಮೆಂಟ್ ಕೈಗೆ ಕಿತ್ತು ಬರುತ್ತಿದೆ. ಅದ್ಯಾವ ಮಟ್ಟಿಗೆ ನೀರು ಹರಿಯುತ್ತಿರಬೇಡ? ಕಟ್ಟಡಕ್ಕೆ ಆಧಾರವಾಗಿರೋ ಪಿಲ್ಲರ್‌ಗಳೇ ಶಕ್ತಿ ಕಳೆದುಕೊಂಡ ಮೇಲೆ ಬೃಹತ್ ಕಟ್ಟಡ ಏನಾಗಬಹುದು? ಆಂತಹ ಅನಾಹುತ ಊಸಹಿಸೋಕು ಭಯಾನಕವಾಗಿದೆ. ಹೀಗಾಗಿ ಮುಂದೊಂದು ದಿನ ಇದೀ ದೇಶದ್ಯಾಂತ ಜಿಲ್ಲಾಸ್ಪತ್ರೆ ಕಟ್ಟಡ ಧೆರಗುರುಳಿದ ದುರಂತ ಆಂತ ಸುದ್ದಿಯಾಗೋ ಬದಲು ದಯಮಾಡಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ.

Share This Article
Leave a Comment

Leave a Reply

Your email address will not be published. Required fields are marked *