ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕು ಕಚೇರಿಯ ಮೊದಲನೇ ಮಹಡಿಯ ಮೇಲ್ಛಾವಣಿ ಕುಸಿದು ಬೀಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಚೇರಿಯ ಆವರಣದಲ್ಲಿರುವ ಗಣೇಶನ ದೇವಾಲಯದ ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿದೆ. ತಾಲೂಕು ಕಚೇರಿಯ ಕಟ್ಟಡ ಕೂಡ ಕುಸಿಯುವ ಹಂತ ತಲುಪಿದ್ದು, ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಪ್ರತಿನಿತ್ಯ ತಾಲೂಕು ಕಚೇರಿಗೆ ನಾನಾ ಕೆಲಸ ಕಾರ್ಯಗಳಿಗೆ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು, ಅಂಗವಿಕಲರು, ವೃದ್ಧರು ಹೀಗೆ ಸಾಕಷ್ಟು ಜನರು ಬರುತ್ತಿರುತ್ತಾರೆ. ಹಾಗಾಗಿ ಇದು ಅಪಾಯವನ್ನು ತಂದೊಡ್ಡಿದೆ. ಇದನ್ನೂ ಓದಿ: ವೈದ್ಯರ ಎಡವಟ್ಟು- ಕೊರೊನಾ ಲಸಿಕೆ ಬದಲು ರೇಬಿಸ್ ವ್ಯಾಕ್ಸಿನ್
ಪ್ರತಿನಿತ್ಯ ಅಧಿಕಾರಿಗಳು ಹಾಗೂ ತಾಲೂಕು ಕಚೇರಿಯ ಸಿಬ್ಬಂದಿ ಕುಸಿಯುತ್ತಿರುವ ಮೇಲ್ಛಾವಣಿಯ ಭಯದಿಂದ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಯಾರಿಗಾದರೂ ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಉನ್ನತ ಅಧಿಕಾರಿಗಳು ದುರಸ್ತಿಕಾರ್ಯ ಮಾಡಿಸಿ ಜನಸಾಮಾನ್ಯರ ಹಾಗೂ ಸಿಬ್ಬಂದಿ ವರ್ಗದ ಬಗ್ಗೆ ಕಾಳಜಿವಹಿಸಬೇಕಿದೆ ಎಂದು ಎಲ್ಲರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ – ಶಿವನ ಭಕ್ತನಾಗಿದ್ದ ಗಾಂಜಾ ಆರೋಪಿ