– ಕಲಾಪವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು ಪಂಚೆ ಪ್ರಸಂಗ
ಬೆಂಗಳೂರು: ಇಂದು ನಡೆಯುತ್ತಿದ್ದ ವಿಧಾನಸಭಾ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಂಚೆ ಪ್ರಸಂಗ ಕಲಾಪದಲ್ಲಿ ಇರುವವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ಸದನದ ಕಲಾಪದ ವೇಳೆ ಸಿದ್ದರಾಮಯ್ಯ ಅವರ ಪಂಚೆ ಬಿಚ್ಚಿರುವುದನ್ನು ಗಮನಿಸಿದ ಡಿಕೆ ಶಿವಕುಮಾರ್, ಪಂಚೆ ಕಳಚಿದೆ ಎಂದು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಹೇಳಿದ್ದಾರೆ. ಆಗ ಸಿದ್ದರಾಮಯ್ಯ ಅವರು ಯಾಕೋ ಇತ್ತೀಚೆಗೆ ಹೊಟ್ಟೆ ಸ್ವಲ್ಪ ದಪ್ಪ ಆಗಿದೆ. ಪಂಚೆ ಬಿಚ್ಚಿ ಹೋಗಿದೆ. ನಾನು ಪಂಚೆ ಕಟ್ಟಿಕೊಂಡು ಬಂದು ಭಾಷಣವನ್ನು ಮಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಆಗ ಕಲಾಪದಲ್ಲಿ ಇದ್ದವರು ನಗೆಗಡಲಲ್ಲಿ ತೇಲಿದ್ದಾರೆ.
ಆಗ ಮಧ್ಯ ಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನಮ್ಮ ಅಧ್ಯಕ್ಷರು ಬಂದು ಪಕ್ಷದ ಮಾನ ಎಂದು ಕಿವಿಯಲ್ಲಿ ಗುಟ್ಟಾಗಿ ಹೇಳಿದ್ದಾರೆ. ಆದರೆ ನೀವು ಊರಿಗೆಲ್ಲ ಹೇಳಿಬಿಟ್ಟ್ರಿ. ಅವರ ಶ್ರಮ ವ್ಯರ್ಥವಾಯಿತ್ತು ಎಂದಿದ್ದಾರೆ. ಸದನದಲ್ಲಿ ಇದ್ದವರು ಸಹಾಯಬೇಕಾ ಎಂದು ಕೇಳಿದ್ದಾರೆ. ಆಗ ರಮೇಶ್ ಕುಮಾರ್ ಅವರ ಉದ್ಯೋಗವೇ ನಮ್ಮ ಪಕ್ಷವನ್ನು ಕಳಚೋದು ಆಗಿದೆ. ನೋಡಿ ಹೇಗೆ ಕಾಯುತ್ತಾ ಕುಳಿತ್ತಿದ್ದಾರೆ ಈಶ್ವರಪ್ಪ ಅವರು ಎಂದು ಹಾಸ್ಯ ಚಟಾಕೆ ಹಾರಿಸಿದ್ದಾರೆ.
ಇಲ್ಲ ಅವರು ಕಳಚಲು ಪ್ರಯತ್ನ ಮಾಡುತ್ತಾರೆ. ಆದರೆ ಸಾಧ್ಯವಾಗಲ್ಲ. ಪಂಚೆ ಕಳಚಿ ಬಿಟ್ಟಿದೆ. ಮೊದಲು ಬಿಚ್ಚು ಹೋಗುತ್ತಿರಲಿಲ್ಲ. ಕೊರೊನಾ ಬಂದ ಮೇಲೆ ಹೊಟ್ಟೆ ಸ್ವಲ್ಪ ದಪ್ಪವಾಯಿತ್ತು, ಹೀಗಾಗಿ ಪಂಚೆ ಬಿಚ್ಚಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಲಾಪದಲ್ಲಿ ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಪ್ರವಾಸೋದ್ಯಮದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಸಾಂಸ್ಕೃತಿಕ ನಗರಿ ಎಂಬುದಕ್ಕೆ ಕಳಂಕ ಬರುತ್ತದೆ ಎಂದು ಈ ವಿಚಾರವಾಗಿ ಮಾತನಾಡುತ್ತಿದ್ದರು. ಆಗ ಈ ಘಟನೆ ನಡೆದಿದೆ.