ನೆಲಮಂಗಲ: ಮೊಬೈಲ್ ರಿಪೇರಿ ಮಾಡಿಸುವ ನೆಪದಲ್ಲಿ ಬಂದ ಐನಾತಿ ಕಳ್ಳ ಯಾರಿಗೂ ಸುಳಿವು ನೀಡದೆ ಮೊಬೈಲ್ ಕಳ್ಳತನ ಮಾಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಾಲಾಜಿ ಮೊಬೈಲ್ ಅಂಗಡಿಗೆ ಬಂದ ಖತರ್ನಾಕ್ ಕಳ್ಳ ಸಿಸಿ ಟಿವಿ ಕ್ಯಾಮೆರಾ ನೋಡುತ್ತಲೇ ಕ್ಷಣಾರ್ಧದಲ್ಲಿ ಬೆಲೆಬಾಳುವ ಮೊಬೈಲ್ ಕದ್ದು ನಾಪತ್ತೆಯಾಗಿದ್ದಾನೆ. ಮೊಬೈಲ್ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಮೊಬೈಲ್ ಕದಿಯುವ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ನಗರದಲ್ಲಿ ಹೊತ್ತಿ ಉರಿದ ಕಾರು
ಮೊಬೈಲ್ ಎಗರಿಸಿದ ತಕ್ಷಣ ಯಾರಿಗೂ ಕೂಡ ಅನುಮಾನ ಬಾರದ ರೀತಿಯಲ್ಲಿ ತನ್ನ ಜೇಬಿನಿಂದ ಬೇಸಿಕ್ ಮೊಬೈಲ್ ತೆಗೆದು ಕರೆ ಬಂದಂತೆ ನಟಿಸಿ ಅಂಗಡಿಯಿಂದ ಪರಾರಿಯಾಗಿದ್ದಾನೆ. ಇನ್ನೂ ಮೊಬೈಲ್ ಅಂಗಡಿ ಮಾಲೀಕರು ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಮೆಗಾ ಶೈಕ್ಷಣಿಕ ಉತ್ಸವ ವಿದ್ಯಾಪೀಠಕ್ಕೆ ನಾಳೆ ಚಾಲನೆ