500 ಟಿ20 ಪಂದ್ಯವಾಡಿ ದಾಖಲೆ ಬರೆದ ಬ್ರಾವೋ

Public TV
1 Min Read
dwayne bravo

ಬಾಸೆಟೆರ್ರೆ: 500 ಟಿ-20 ಪಂದ್ಯವಾಡಿದ ವಿಶ್ವದ ಎರಡನೇ ಆಟಗಾರ ಎಂಬ ವಿಶ್ವ ದಾಖಲೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಡ್ವೇನ್ ಬ್ರಾವೋ ಭಾಜರಾಗಿದ್ದಾರೆ.

bravo 3

37 ವರ್ಷದ ಈ ದೈತ್ಯ ಆಟಗಾರ, ನಿನ್ನೆ ನಡೆದ ಕೆರೆಬಿಯನ್ ಲೀಗ್ ನ ಫೈನಲ್ ಪಂದ್ಯವನ್ನು ಆಡುವ ಮೂಲಕ ಈ ವಿಶ್ವದಲ್ಲೇ 500 ಟಿ-20 ಪಂದ್ಯವಾಡಿದ ಎರಡನೇ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

bravo 13

ಮೊದಲ ಸ್ಥಾನವನ್ನು ಅವರದೇ ದೇಶದ ಮತ್ತೊಬ್ಬ ಸ್ಟಾರ್ ಆಟಗಾರ ಕೀರೊನ್ ಪೊಲಾರ್ಡ್ ಅವರಿಸಿಕೊಂಡಿದ್ದಾರೆ. ತಮ್ಮ ದೇಶಕ್ಕಾಗಿ ಅಷ್ಟೇ ಅಲ್ಲದೆ ಎಲ್ಲಾ ದೇಶದ ಫ್ರಾಂಚೈಸಿ ಟಿ-20 ಲೀಗ್ ನಲ್ಲಿ ಆಡಿರುವ ಬ್ರಾವೋ ಉತ್ತಮ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡಿದ ಶ್ವಾನಕ್ಕೆ ಐಸಿಸಿ ಪುರಸ್ಕಾರ..!

bravo 12

2006ರಲ್ಲಿ ಟಿ-20 ಪಂದ್ಯಕ್ಕೆ ಪಾದರ್ಪಣೆ ಮಾಡಿದ ಬ್ಯಾವೋ, 2010ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. 2017ರ ಬಳಿಕ ಏಕದಿನ ಕ್ರಿಕೆಟ್ ನಲ್ಲೂ ಕೂಡ ಭಾಗವಹಿಸಿಲ್ಲ. ಆದರೆ ಟಿ-20 ಕ್ರಿಕೆಟ್ ನಲ್ಲಿ ಮಾತ್ರ ಅಬ್ಬರಿಸುತ್ತಾ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.  ಇದನ್ನೂ ಓದಿ: ಐಪಿಎಲ್ ನಿಯಮಿತ ಪ್ರೇಕ್ಷಕರಿಗೆ ಗ್ಯಾಲರಿ ಪ್ರವೇಶ ಪಡೆಯಲು ಅನುಮತಿ

ಸಿಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ 499 ಟಿ 20 ಪಂದ್ಯವಾಡಿದ್ದ ಬ್ರಾವೋ ಒಟ್ಟು 6566 ರನ್ ಕಲೆ ಹಾಕಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ನಲ್ಲಿಯು ಮಿಂಚಿರುವ ಬ್ರಾವೋ ಬರೋಬ್ಬರಿ 540 ವಿಕೆಟ್ ಉರುಳಿಸಿದ್ದಾರೆ. ಆಟದ ಜೊತೆ ಪ್ರೇಕ್ಷರಿಕೆ ಮೈದಾನದಲ್ಲಿ ವಿಶಿಷ್ಟ ಡ್ಯಾನ್ಸ್ ಮೂಲಕ ರಂಜಿಸುವ ಬ್ರಾವೋ ಪ್ರಸ್ತುತ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *