ಚಿಕ್ಕಬಳ್ಳಾಪುರ: ಬೀದಿ ನಾಯಿಯೊಂದರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ನಾಲ್ಕನೇ ವಾರ್ಡ್ ನಲ್ಲಿ ನಡೆದಿದೆ.
ನಗರದ ನಾಲ್ಕನೇ ವಾರ್ಡಿನ ಎಡಿ ಕಾಲೋನಿಯ ಸ್ನೇಹಿತರ ಬಳಗದಿಂದ ಬೀದಿ ನಾಯಿಗೆ ಸನ್ಮಾನ ಮಾಡಲಾಗಿದೆ. ಕೆಲವು ವರ್ಷಗಳ ಹಿಂದೆ ಸಾಕು ನಾಯಿಯನ್ನು ತಂದು ದೇವಸ್ಥಾನದ ಆವರಣದಲ್ಲಿ ಬಿಟ್ಟು ಅದಕ್ಕೆ ಶೇರ್ ಖಾನ್ ಎಂದು ಹೆಸರು ಸಹ ಇಡಲಾಗಿತ್ತು. ಈಗ ಅದೇ ಶೇರ್ ಖಾನ್ ಹುಟ್ಟು ಹಬ್ಬದ ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಫ್ಲೆಕ್ಸ್ ಕಟ್ಟಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಈ ವೇಳೆ ಪಟಾಕಿ ಹೊಡೆದು ಯುವಕರು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ಲವ್ ಲೆಟರ್ ಬಂದಿದೆ – ಆಪ್ ನಾಯಕ
ಥೇಟ್ ರಾಜಕೀಯ ಮುಖಂಡರಿಗೆ ಅದ್ಧೂರಿ ಸನ್ಮಾನ ಮಾಡುವ ರೀತಿಯಲ್ಲಿ, ಸ್ಥಳೀಯ ಯುವಕರ ಶೇರ್ ಖಾನ್‍ಗೆ ಮಾಡಿದ್ದಾರೆ. ಕೇಕ್ ಮೇಲೆ ನಾಯಿಯ ಭಾವಚಿತ್ರ ಹಾಕಿಸಿ ಕಟ್ ಮಾಡಿಸಿದ್ದಾರೆ. ತಮ್ಮ ಅಚ್ಚುಮೆಚ್ಚಿನ ನಾಯಿಗೆ ಶಾಲು ತೋಡಿಸಿ ಹೂವಿನ ಹಾರ ಹಾಕಿ ಸಂಭ್ರಮಿಸುವ ಮೂಲಕ ವಿನೂತನವಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಇದನ್ನೂ ಓದಿ: ಮೀನು ಹಿಡಿಯಲು ಹೋದ ಯುವಕ ನೀರುಪಾಲು
ಹುಟ್ಟುಹಬ್ಬಕ್ಕೆ ಏರಿಯಾದ ಗೆಳೆಯರೆಲ್ಲ ಒಂದೆಡೆ ಸೇರಿ ನಾಯಿಯನ್ನು ಕರೆ ತಂದು ಮನುಷ್ಯನ ರೀತಿಯಲ್ಲಿ ಗೌರವ ನೀಡಿದ್ದು ವಿಶೇಷವಾಗಿದೆ. ಇದನ್ನೂ ಓದಿ: ಪೆಟ್ರೋಲ್ ಸುರಿದು ಪತಿಯನ್ನು ಹತ್ಯೆಗೈದು ಚರಂಡಿಗೆ ಶವ ಎಸೆದ್ಳು
ಈ ಕುರಿತು ಪ್ರತಿಕ್ರಿಯಿಸಿದ ಯುವಕರು, ನಮ್ಮ ಏರಿಯಾದಲ್ಲಿ ಪೊಲೀಸರ ತರ ಕೆಲಸವನ್ನು ಈ ಶೇರ್ ಖಾನ್ ಮಾಡುತ್ತೆ. ತಮ್ಮ ಏರಿಯಾಗೆ ಬೀಟ್ ಪೊಲೀಸರ ಅವಶ್ಯಕತೆಯಿಲ್ಲ. ವಾರ್ಡಿನಲ್ಲಿ ಕಳ್ಳ ಖದೀಮರನ್ನು ಬೆನ್ನತ್ತಿ ಹಿಡಿಯುತ್ತೆ. ಬೇರೆ ಬೀದಿ ನಾಯಿಗಳು ಬಂದರೆ ವಾಪಸ್ ಓಡಿಸುತ್ತೆ. ಅದಕ್ಕೆ ನಾವು ನಾಯಿಗೂ ಗೌರವ ಕೊಟ್ಟು ಮಾನವೀಯತೆ ಮೆರೆದಿದ್ದೇವೆ ಎಂದು ಹೇಳಿದ್ದಾರೆ.