ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ – ಛತ್ತೀಸ್‍ಗಢದ ಸಿಎಂ ತಂದೆ ಅರೆಸ್ಟ್

Public TV
2 Min Read
CM

ಛತ್ತೀಸ್‍ಗಢ: ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ್ ಕುಮಾರ್ ಬಘೇಲ್ ಅವರನ್ನು ನಿನ್ನೆ ಪೊಲೀಸರು ಅರೆಸ್ಟ್ ಮಾಡಿದ್ದು, ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

cm f 2

ಈ ಕುರಿತು ಪ್ರತಿಕ್ರಿಯಿಸಿದ ಅವರ ವಕೀಲ, ನಾವು ಜಾಮೀನು ಕೋರಲಿಲ್ಲ. ನೇರವಾಗಿ ಸೆಪ್ಟೆಂಬರ್ 21 ರಂದು ನ್ಯಾಯಾಲಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.  ಇದನ್ನೂ ಓದಿ:  ಶಾಲಾ ಕಟ್ಟಡ ನಿರ್ಮಾಣಕ್ಕೆ ಅಡ್ಡಿ – ಕ್ರೀಡಾಪಟುಗಳ ಮೇಲೆ ಮಾಧುಸ್ವಾಮಿ ಗರಂ

ಕಾನೂನಿನ ಮುಂದೆ ತಲೆಬಾಗಲೇ ಬೇಕು!:

ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ಭೂಪೇಶ್ ಬಘೇಲ್, ನನ್ನ ಸರ್ಕಾರದಲ್ಲಿ ಯಾರೂ ಕಾನೂನನ್ನು ಮೀರುವಂತಿಲ್ಲ. ಅವರು ಸಿಎಂ ಅವರ 86 ವರ್ಷದ ತಂದೆಯಾಗಿದ್ದರೂ ಸಹ ಅವರು ಕಾನೂನಿನ ಮುಂದೆ ತಲೆಬಾಗಲೇ ಬೇಕು. ಮುಖ್ಯಮಂತ್ರಿಯಾಗಿ ವಿವಿಧ ಸಮುದಾಯಗಳ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಅವರು ಒಂದು ಸಮುದಾಯದ ವಿರುದ್ಧ ಟೀಕೆ ಮಾಡಿದ್ದರೆ, ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಇದಕ್ಕೆ ಕಾನೂನು ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ:  ಜಾತಿಗಣತಿ ವರದಿ ಬಹಿರಂಗ ಆಗಬೇಕು: ಜಿ.ಪರಮೇಶ್ವರ್

ನನ್ನ ತಂದೆಯೊಂದಿಗಿನ ನನ್ನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ನಮ್ಮ ರಾಜಕೀಯ ಆಲೋಚನೆಗಳು ಮತ್ತು ನಂಬಿಕೆಗಳು ಅವರಿಗಿಂತ ವಿಭಿನ್ನವಾಗಿವೆ. ನಾನು ಅವರ ಮಗನಾಗಿ ಅವರನ್ನು ಗೌರವಿಸುತ್ತೇನೆ. ಆದರೆ ಮುಖ್ಯಮಂತ್ರಿಯಾಗಿ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಇಂತಹ ತಪ್ಪುಗಳಿಗಾಗಿ ನಾನು ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ನಿಖರವಾಗಿ ಹೇಳಿದ್ದಾರೆ.

ನಮ್ಮ ಸರ್ಕಾರವು ಪ್ರತಿಯೊಂದು ಧರ್ಮ, ಜಾತಿ ಮತ್ತು ಸಮುದಾಯದವರ ಭಾವನೆಯನ್ನು ಗೌರವಿಸುತ್ತೆ ಎಂದು ಒತ್ತಿ ಹೇಳಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗ್ರಾನೈಟ್ ಉದ್ಯಮಿಯ ಮನೆಗೆ ಕನ್ನ – 3 ಕೆಜಿ ಚಿನ್ನ, 25 ಲಕ್ಷ ಹಣ ಕದ್ದ ಆರೋಪ

cm22

ಏನಿದು ಘಟನೆ?
ಇತ್ತೀಚೆಗೆ ಉತ್ತರಪ್ರದೇಶಕ್ಕೆ ಭೇಟಿ ನೀಡಿದ ನಂದ್ ಕುಮಾರ್ ಬಘೇಲ್ ಅವರು, ಮತದಾರರಿಗೆ ಜಾಗೃತಿ ಮೂಡಿಸುವ ಗುಂಪಿನ ಮುಖ್ಯಸ್ಥರಾಗಿದ್ದು, ಪ್ರಮುಖ ಒಬಿಸಿ ಧ್ವನಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಬ್ರಾಹ್ಮಣರನ್ನು ಗಂಗಾ ನದಿಯಿಂದ ವೋಲ್ಗಾಗೆ ಕಳುಹಿಸಬೇಕು. ಅವರು ವಿದೇಶಿಯರು. ಅವರು ನಮ್ಮ ದೇಶಕ್ಕೆ ಬಂದು ನಮ್ಮನ್ನೇ ಅಸ್ಪøಶ್ಯರು ಎಂದು ಹೇಳುತ್ತಾರೆ. ಅದು ಅಲ್ಲದೇ ನಮ್ಮ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಬ್ರಾಹ್ಮಣರು ತಮ್ಮ ಹಳ್ಳಿಗೆ ಪ್ರವೇಶಿಸದಂತೆ ನಾನು ಗ್ರಾಮಸ್ಥರನ್ನು ಒತ್ತಾಯಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ:   ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ

ನಂದ್ ಕುಮಾರ್ ಅವರು ಮೇಲ್ಜಾತಿ ವಿರೋಧಿಯಾಗಿದ್ದು, 2000ರಲ್ಲಿ ಈ ವಿಷಯದ ಕುರಿತು ಪುಸ್ತಕವನ್ನು ಬರೆದಿದ್ದರು. ಆದರೆ ಅದನ್ನು  ಕಾಂಗ್ರೆಸ್ ಸರ್ಕಾರವು ನಿಷೇಧಿಸಿತು.

Share This Article
Leave a Comment

Leave a Reply

Your email address will not be published. Required fields are marked *