ತುಮಕೂರು: ಕಾಂಗ್ರೆಸ್ ಪಕ್ಷದಲ್ಲೂ ಸಾಕಷ್ಟು ತಾಲಿಬಾನಿಗಳಿದ್ದು, ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಒಂಥರಾ ತಾಲಿಬಾನೇ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡ ಶ್ರೀನಿವಾಸ್‍ಮೂರ್ತಿ ಮನೆಗೆ ಬೆಂಕಿ ಹಾಕಿದ್ದ ಪ್ರಕರಣದಲ್ಲಿ ಇವರೆಲ್ಲ ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಗೊತ್ತಿದೆ. ಈ ತಾಲಿಬಾನಿಗಳು ಪೊಲೀಸ್ ಠಾಣೆಗೆ ನುಗ್ಗಿ ಹೊಡಿದಿದ್ದು ಮರೆತು ಹೋಯಿತಾ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಫೋಟೋ ಚೆನ್ನಾಗಿ ಬಂದಿದ್ಯಾ ಅಂತ ಚೆಕ್ ಮಾಡ್ತಿದ್ದಾನೆ ರಾಯನ್: ಸುಧಾರಾಣಿ
ಜಮೀರ್ ಹಾಗೂ ಅಸಾದುದ್ದೀನ್ ಓವೈಸಿಯನ್ನು ಬಂಧಿಸಬೇಕು. ಇವರೆಲ್ಲ ಷರಿಯತ್ ಅನುಷ್ಠಾನಕ್ಕೆ ಬೆಂಬಲ ಕೊಡುತ್ತಾರೆ. ಹೀಗಾಗಿ ಇವರೆಲ್ಲ ಕಳ್ಳತನ ಮಾಡಿದರೆ ಕೈ ಕತ್ತರಿಸಿ ಬಿಡೋಣ. ವ್ಯಭಿಚಾರ ಮಾಡಿದರೆ ಕುತ್ತಿಗೆ ತನಕ ಮಣ್ಣಿನಲ್ಲಿ ಹೂತು ಕತ್ತು ಕತ್ತರಿಸಬೇಕು ಎಂದು ಕಿಡಿಕಾರಿದ್ದಾರೆ.