ಕಾಬೂಲ್: ತಾಲಿಬಾನ್ ಉಗ್ರರ ದಾಳಿಯಿಂದ ಈಗಾಗಲೇ ತತ್ತರಿಸಿ ಹೋಗಿದ್ದ ಜನರು ಈಗ ಹಣಕ್ಕಾಗಿ ಪರದಾಡುವಂತೆ ಆಗಿದೆ.
ಮೂರು ದಿನಗಳ ಹಿಂದೆಯಷ್ಟೇ ಬ್ಯಾಂಕ್ ವಹಿವಾಟು ಪ್ರಾರಂಭವಾಗಿದ್ದು, ಇದರ ಮಧ್ಯೆ ‘ನ್ಯೂ ಕಾಬೂಲ್ ಬ್ಯಾಂಕ್’ ಸಿಬ್ಬಂದಿ ಸೇರಿದಂತೆ ಇತರೆ ಸರ್ಕಾರಿ ಉದ್ಯೋಗಿಗಳು ತಮ್ಮ ಐದಾರು ತಿಂಗಳ ವೇತನ ನೀಡುವಂತೆ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಜನರು ಎಟಿಎಂ ಮುಂದೆ ಕ್ಯೂ ನಿಂತು ಹಣವಿಲ್ಲದೇ ದಿಕ್ಕಿತೋಚದ ಪರಿಸ್ಥಿತಿಯಲ್ಲಿದ್ದಾರೆ.ಇದನ್ನೂ ಓದಿ:ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಗಂಡು ಮಕ್ಕಳಿಗೆ ಮನೆಯಲ್ಲಿ ಹೇಳಬೇಕು: ಪೂಜಾಗಾಂಧಿ
ಇತ್ತೀಚೆಗಷ್ಟೇ ಬ್ಯಾಂಕ್ ಪ್ರಾರಂಭಿಸಿದ್ದರೂ ಸಹ ಎಟಿಎಂನಲ್ಲಿ ಹಣವಿಲ್ಲವೆಂದು ಜನರು ಪೇಚಾಡುತ್ತಿದ್ದಾರೆ. ಕೆಲವು ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದರೂ, ಸಹ ಅವುಗಳಲ್ಲಿ ದಿನಕ್ಕೆ 200 ಡಾಲರ್ ಅಷ್ಟೇ ಹಣ ತೆಗೆಯಲು ಸಾಧ್ಯವಾಗುತ್ತಿದೆ. ಈ ಕಾರಣಕ್ಕೆ ಎಟಿಎಂ ಮುಂದೆ ಜನರ ಕ್ಯೂ ನಿಂತಿದ್ದಾರೆ.
ಗುರುವಾರ ಬಾಂಬ್ ದಾಳಿ ಬಳಿಕ ದೇಶ ತೊರೆಯುವವರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ತಾಲಿಬಾನಿಗಳನ್ನು ವಿಮಾನ ನಿಲ್ದಾಣದ ಸಮೀಪ ಮತ್ತು ಸಂಪರ್ಕಿಸುವ ಕಲ್ಪಿಸುವ ಮಾರ್ಗಗಳಲ್ಲಿ ಜನರನ್ನು ನೇಮಿಸಿದೆ. ಇತ್ತ ಬ್ರಿಟನ್, ಜರ್ಮನಿ ಸೇರಿದಂತೆ ಹಲವು ದೇಶಗಳು ಏರ್ ಲಿಫ್ಟ್ ಮಾಡೋದನ್ನ ಸ್ಥಗಿತಗೊಳಿಸಿವೆ. ಇತ್ತ ಆಗಸ್ಟ್ 31ರೊಳಗೆ ರಕ್ಷಣಾ ಕಾರ್ಯ ಪೂರ್ಣವಾಗದಿದ್ರೆ ನಮ್ಮ ಕಾರ್ಯಚರಣೆ ಮುಂದುವರಿಯಲಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಆಗಸ್ಟ್ 31ರೊಳಗೆ ತಮ್ಮ ಸೇನೆಯನ್ನು ಹಿಂಪಡೆಯುವಂತೆ ಅಮೆರಿಕಾಗೆ ತಾಲಿಬಾನಿಗಳು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ:ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್