ಮುಂಬೈ: ಚಿತ್ರೀಕರಣದ ವೇಳೆ ಕೈ ಮುರಿದುಕೊಂಡಿದ್ದ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ರವರು ಶಸ್ತ್ರ ಚಿಕಿತ್ಸೆ ನಂತರ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ಸ್ನೇಹಿತರಿಗೆ ಮತ್ತು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
ಅಭಿಷೇಕ್ ತಮ್ಮ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದು, ಒಂದು ಕೈಗೆ ಬ್ಯಾಡೇಜ್ ಸುತ್ತಿಕೊಂಡು ಚೇರ್ ಮೇಲೆ ಕುಳಿತು ಪೋಸ್ ನೀಡಿದ್ದಾರೆ. ಜೊತೆಗೆ ಕಳೆದ ಬುಧವಾರ ಚೆನ್ನೈನಲ್ಲಿ ನನ್ನ ಹೊಸ ಸಿನಿಮಾದ ಶೂಟಿಂಗ್ ಸೆಟ್ನಲ್ಲಿ ಅವಘಡ ಸಂಭವಿಸಿದ್ದು, ನನ್ನ ಬಲ ಗೈ ಮುರಿದಿದೆ. ಅದನ್ನು ಸರಿಪಡಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸುವ ಅಗತ್ಯವಿತ್ತು. ಹಾಗಾಗಿ ಮನೆಯಿಂದ ಮುಂಬೈಗೆ ಪ್ರಯಾಣ ಮಾಡುತ್ತಿದ್ದೆ. ಇದೀಗ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಎಲ್ಲಾ ಪ್ಯಾಚ್-ಅಪ್ ಮತ್ತು ಕ್ಯಾಸ್ಟ್ ಮಾಡಲಾಗಿದೆ ಮತ್ತು ಕೆಲಸ ಪುನಾರಂಭಿಸಲು ಚೆನ್ನೈಗೆ ಹಿಂದಿರುಗುತ್ತಿದ್ದೇನೆ. ಪುರುಷರಿಗೆ ನೋವಾಗುವುದಿಲ್ಲ ಎಂದು ನನ್ನ ತಂದೆ ಹೇಳಿದ್ದಾರೆ. ಆದರೂ ಸ್ವಲ್ಪ ನೋವಿದೆ. ನನ್ನ ಚೇತರಿಕೆಗಾಗಿ ಶುಭಾ ಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಕೈ ನೋವಿನಿಂದ ಬಳಲುತ್ತಿರುವ ಅಭಿಷೇಕ್ ಬಚ್ಚನ್ – ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ಭೇಟಿ
View this post on Instagram
ಸದ್ಯ ಈ ಫೋಟೋ ವೀಕ್ಷಿಸಿದ ಸಂಜಯ್ ಗುಪ್ತಾರವರು ಒಂದು ಕೈ ಸಂಪೂರ್ಣವಾಗಿ ಕಾರ್ಯನಿರತವಾಗಿದೆ. ಆದರೆ ನನ್ನ ಪ್ರೀತಿಯ ಸ್ನೇಹಿತ ಅಭಿಷೇಕ್ ಬಚ್ಚನ್ ಇನ್ನೂ ಕಷ್ಟಕರವಾದ ಕೆಡ್ಸ್ ಶೂ ಧರಿಸಿದ್ದಾರೆ ಎಂದು ಟ್ವೀಟರ್ನಲ್ಲಿ ರೀ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಬನಿಯನ್ನಲ್ಲಿ ರಣ್ವೀರ್ ಡ್ಯಾನ್ಸ್ – ನಾಚಿ ನೀರಾದ ದೀಪಿಕಾ
One hand totally out of action but my dear buddy @juniorbachchan still wears the most complicated keds. ???????? pic.twitter.com/tKoEwSm5gY
— Sanjay Gupta (@_SanjayGupta) August 25, 2021