ಬಿಗ್‍ಬಾಸ್ ಸೀಸನ್8 ಮುಗಿದು 2 ದಿನ ಆಗಿದೆ. ಅಷ್ಟರಲ್ಲೇ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಆಟ ಆರಂಭವಾಗಿದೆ.
ಖಾಸಗಿ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಕಲರ್ಸ್ ವಾಹಿನಿಯ ಧಾರಾವಾಹಿಗಳ ಪಾತ್ರಧಾರಿಗಳು ಇದ್ದಾರೆ. ‘ನನ್ನರಸಿ ರಾಧೆ’ ಧಾರಾವಾಹಿಯ ನಟ ಅಭಿನವ್ ವಿಶ್ವನಾಥನ್, ಕೌಸ್ತುಭಮಣಿ, ‘ಕನ್ನಡತಿ’ ಧಾರಾವಾಹಿಯ ನಟ ಕಿರಣ್ ರಾಜ್, ‘ಮಂಗಳಗೌರಿ ಮದುವೆ’ ಧಾರಾವಾಹಿಯ ನಟ ಗಗನ್ ಚಿನ್ನಪ್ಪ ಮುಂತಾದವರು ಬಿಗ್‍ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಬಿಗ್‍ಬಾಸ್ ಇಷ್ಟು ಬೇಗ ಪ್ರಾರಂಭವಾಯಿತ್ತಾ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಾರೆ. ಆದರೆ ಅಸಲಿಯತ್ತು ಬೇರೆ ಇದೆ.
View this post on Instagram
ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿದಿದೆ. ಆದರೆ ಈ ಕಾರ್ಯಕ್ರಮ ಹೊಸ ರೀತಿಯಲ್ಲಿ ಮೂಡಿ ಬರಲಿದೆ. ಆದರೆ ಹೊಸ ಸೀಸನ್ ಅಲ್ಲ. ಬಿಗ್ ಬಾಸ್ ಫ್ಯಾಮಿಲಿ ಅಂತ ಈ ಶೋವನ್ನು ನಾಮಕರಣ ಮಾಡಲಿದೆ. ಧಾರಾವಾಹಿಯ ನಟ-ನಟಿಯರು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಅವರಿಗೂ ಟಾಸ್ಕ್ ಕೂಡ ನೀಡಲಾಗುವುದು. ಕೆಲವಾರ ಈ ಶೋ ಪ್ರಸಾರ ಆಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಿಗ್ ಬಾಸ್ ಶೋ ಮುಗಿದ ನಂತರ ಇದೇ ಮೊದಲ ಬಾರಿಗೆ ಈ ರೀತಿಯ ಶೋವೊಂದನ್ನು ಆಯೋಜಿಸಲಾಗಿದೆ. ಶೀಘ್ರದಲ್ಲಿಯೇ ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗುವುದು ಎಂದು ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಹೇಳಿದ್ದಾರೆ. ಅಲ್ಲಿಯವರೆಗೆ ಬಿಗ್ ಬಾಸ್ ಫ್ಯಾಮಿಲಿ ಪ್ರಸಾರ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಕುರಿತು ವಾಹಿನಿ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ.