– ಕೃಷ್ಣಾ ನದಿಯ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ
ಯಾದಗಿರಿ: ಬಸವಸಾಗರ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿದ್ದು, ಕೃಷ್ಣಾ ನದಿಯ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ.
ಅಪಾರ ಪ್ರಮಾಣದ ನೀರು ಬರುತ್ತಿರುವುದರಿಂದ ತಿಂಥಣಿ ಗ್ರಾಮ ಜಲಾವೃತ ಭೀತಿಯಲ್ಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರು ಮನೆ ಖಾಲಿ ಮಾಡುತ್ತಿದ್ದಾರೆ. ಹಯ್ಯಾಳ, ಹತ್ತಿಗೂಡರು ರಸ್ತೆಯ ಮಧ್ಯದಲ್ಲಿನ ಸೇತುವೆ ಜಲಾವೃತಗೊಂಡಿದೆ. ಇನ್ನೂ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮದ ಸಂಪರ್ಕ ಸೇತುವೆ ಕೃಷ್ಣಾ ನದಿಯ ಪ್ರವಾಹಕ್ಕೆ ಸಂಪರ್ಕ ಕಳೆದುಕೊಂಡಿದೆ. ಸೇತುವೆಗೆ ಅಂಟಿಕೊಂಡು ನೀರು ಹರಿಯುತ್ತಿರುವ ಜೊತೆ ಕೆಲ ಕಡೆ ಸೇತುವೆ ಮೇಲ್ಭಾಗದಲ್ಲಿ ನೀರು ಹರಿದು ಹೋಗುತ್ತಿದೆ.
ಸೇತುವೆ ಕೊಚ್ಚಿಕೊಂಡು ಹೋಗುವ ಆತಂಕ ಹಿನ್ನೆಲೆ ಸೇತುವೆ ಮೇಲೆ ತೆರಳಲು ನಿರ್ಬಂಧ ಹಾಕಲಾಗಿದೆ. ಸರ್ಕಾರ ನೀಲಕಂಠರಾಯನಗಡ್ಡಿ ಜನರಿಗೆ ಕೃಷ್ಣಾ ನದಿಯ ಪ್ರವಾಹ ಸಂದರ್ಭದಲ್ಲಿ ಊರಿಗೆ ತೆರಳಲು ಅನುಕೂಲವಾಗಲು ಪಾದಚಾರಿ ಸಂಪರ್ಕ ಸೇತುವೆ ನಿರ್ಮಾಣ ಮಾಡಿತ್ತು. ಕಳೆದ ವರ್ಷ ಕೂಡ ಕೃಷ್ಣಾ ನದಿಯ ಅಬ್ಬರಕ್ಕೆ ಸೇತುವೆ ಕೆಲ ಭಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಇದನ್ನೂ ಓದಿ: ರಾಕಿಂಗ್ ಪುತ್ರಿಯ ಸಂದೇಶ
ದುರಸ್ತಿ ಕಾರ್ಯ ಮಾಡಿದರು ಬಸವಸಾಗರ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡುತ್ತಿರುವ ಪರಿಣಾಮ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಭೀತಿಯಿದೆ. ಗ್ರಾಮಕ್ಕೆ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಗಡ್ಡಿಯಲ್ಲಿ 150 ಜನರು ವಾಸ ಮಾಡುತ್ತಿದ್ದು ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿ ಈಗಾಗಲೇ ಆಹಾರ ಕಿಟ್ ವಿತರಣೆ ಮಾಡುವ ಜೊತೆ ಇಬ್ಬರು ಗರ್ಭಿಣಿಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಸ್ಟ್ರಾಂಗ್ ಎಂದ ಅನಂತ್ ಕುಮಾರ್ ಪುತ್ರಿ, ತೆನೆ ಹೊರುತ್ತಾರಾ?