ಹಾಸನ: ಬೈಕ್ ಮತ್ತು ಕಾರು ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಹಾಸನದ ಜಾವಗಲ್ ಸಮೀಪ ನಡೆದಿದೆ.
ಸ್ವಾಮಿ ಮೃತನಾಗಿದ್ದಾನೆ. ಇಂದು ಬೆಳಗ್ಗೆ ಬಾಣಾವರ ಕಡೆಗೆ ಬೈಕ್‍ನಲ್ಲಿ ತೆರಳುವ ವೇಳೆ ಎದುರಿನಿಂದ ಬಂದ ಕಾರು ಬೈಕ್‍ಗೆ ಡಿಕ್ಕಿಯಾಗಿದೆ. ಈ ವೇಳೆ ಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ : ಫಟಾಫಟ್ ಅಂತ ಮಾಡಿ ಬೀಟ್‍ರೂಟ್ ಹಲ್ವಾ
ಸ್ವಾಮಿ ಹಾಸನದ ಸುಂಡಳ್ಳಿ ನಿವಾಸಿಯಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಾಮಿ, ಇಂದು ಕೆಲಸದ ನಿಮಿತ್ತ ಹೋಗುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸ್ವಾಮಿ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯವರು ಪರಿಹಾರ ನೀಡಬೇಕೆಂದು ಸಂಬಂಧಿಕರು ಮತ್ತು ಸ್ನೇಹಿತರು ಒತ್ತಾಯಿಸಿದ್ದಾರೆ. ಹೀಗಾಗಿ ಕಂಪನಿಯ ಕಚೇರಿ ಎದುರು ಸ್ವಾಮಿ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಜಾವಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ : ನಮ್ಮ ಧರ್ಮ, ನಮ್ಮ ಧರ್ಮ ಎನ್ನುವವರು ಪರಧರ್ಮ ಸಹಿಷ್ಣುಗಳಾಗಿ: ಸಿದ್ದರಾಮಯ್ಯ