Connect with us

Food

ಫಟಾಫಟ್ ಅಂತ ಮಾಡಿ ಬೀಟ್‍ರೂಟ್ ಹಲ್ವಾ

Published

on

Share this

ತಿಥಿಗಳು ಮನೆ ಬಂದಾಗ ನಾವು ಹೆಚ್ಚಾಗಿ ಸಹಿ ತಿಂಡಿಗಳನ್ನು ಮಾಡುತ್ತೇವೆ. ಮನೆಗೆ ಬಂದ ಅತಿಥಿಗಳಿಗೆ ಪ್ರತಿ ಬಾರಿ ಒಂದೆ ರೀತಿಯ ಸಿಹಿ ತಿನಿಸುಗಳನ್ನು ತಿಂದು, ಮಾಡಿ ಬೇಸರವಾಗಿರುತ್ತದೆ. ಹೀಗಾಗಿ ನೀವು ಹೊಸ ಅಡುಗೆಯನ್ನು ಮಾಡಲು ಪ್ರಯತ್ನಿಸುತ್ತಿರುತ್ತಿರ. ನೀವು ಒಮ್ಮ ಬೀಟ್‍ರೂಟ್ ಹಲ್ವಾ ಮಾಡಲು ಪ್ರಯತ್ನಿಸಿ. ಖಂಡಿತವಾಗಿಯೂ ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಇಷ್ಟವಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

*ಬೀಟ್‍ರೂಟ್- 4
*ಹಾಲು – 2 ಕಪ್
*ಸಕ್ಕರೆ – 2ಕಪ್
*ಏಲಕ್ಕಿ ಪುಡಿ – 1 ಟೀ ಸ್ಪೂನ್
*ತುಪ್ಪ – 3 ಟೀ ಸ್ಪೂನ್
*ಗೋಡಂಬಿ – ಸ್ವಲ್ಪ
*ಒಣ ದ್ರಾಕ್ಷಿ – ಸ್ವಲ್ಪ
*ಬಾದಾಮಿ – ಸ್ವಲ್ಪ
*ಕೋವಾ – 100 ಗ್ರಾಂ


ಮಾಡುವ ವಿಧಾನ:
* ಬೀಟ್‍ರೂಟ್‍ನ್ನು ಚೆನ್ನಾಗಿ ತೊಳೆದು, ಸಿಪ್ಪೆಯನ್ನು ತೆಗೆಯಬೇಕು.
* ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಕಾಯಿಸಬೇಕು. ನಂತರ ಗೋಡಂಬಿ, ಬಾದಾಮಿ ಬೀಜಗಳನ್ನು ಚೆನ್ನಾಗಿ ಫ್ರೈ ಮಾಡಿ ಒಂದು ಕಡೆ ತೆಗೆದಿಟ್ಟಿರಬೇಕು.

* ನಂತರ ಸಿಪ್ಪೆ ತೆಗೆದ ಬೀಟ್‍ರೂಟ್‍ನ್ನು ತುಪ್ಪದಲ್ಲಿ ಹಾಕಿ ಚೆಬ್ಬಾಗಿ ಫ್ರೈ ಮಾಡಬೇಕು
* ಈಗ ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ ಚೆನ್ನಾಗಿ ಬೇಯಿಸಬೇಕು.

* ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತೆ ಬೇಯಿಸಬೇಕು.
* ಮಿಶ್ರಣವು ಗಟ್ಟಿಯಾಗುತ್ತದ್ದಂತೆ ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.


* ಇದೀಗ ಆರೋಗ್ಯಕರವಾದ ಹಲ್ವಾ ಸಿದ್ಧವಾಗುತ್ತದೆ.

Click to comment

Leave a Reply

Your email address will not be published. Required fields are marked *

Advertisement