ಉಡುಪಿ: ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಮುಂಗಾರು ಮಳೆ ಸುರಿಯುತ್ತಿದೆ. ಮುಂದಿನ ಐದು ದಿನ ಜಿಲ್ಲೆಗೆ ಆರೆಂಜ್ ಅಲರ್ಟ್ ವಿಸ್ತರಣೆ ಮಾಡಿ ರಾಜ್ಯ ಹವಾಮಾನ ಇಲಾಖೆ ಆದೇಶ ಹೊರಡಿಸಿದೆ.
ಎರಡು ದಿನ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, 40-50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ನಾಡದೋಣಿ ಮೀನುಗಾರಿಕೆ ನಡೆಸದಂತೆ ಸೂಚನೆ ನೀಡಲಾಗಿದ್ದು, ನದಿ, ಸಮುದ್ರ ಪಾತ್ರದ ಜನ ಎಚ್ಚರಿಕೆ ವಹಿಸುವಂತೆ ಉಡುಪಿ ಜಿಲ್ಲಾಡಳಿತ ಸೂಚನೆ ನೀಡಿದೆ.
ಜೂನ್ ತಿಂಗಳಲ್ಲಿ ಮುಂಗಾರು ಮಳೆ ನಿಗದಿತ ಪ್ರಮಾಣದಲ್ಲಿ ಸುರಿದಿಲ್ಲ. ಜುಲೈನಲ್ಲಿ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿತ್ತು. ರೋಮನ ಇಲಾಖೆ ಸೂಚನೆಯಂತೆ ಜುಲೈ ಮೊದಲ ವಾರದಲ್ಲಿ ಭಾರಿ ಮಳೆ ಆರಂಭವಾಗಿದೆ.
ಕಳೆದ 10 ದಿನಗಳಿಂದ ಮುಂಗಾರುಮಳೆ ಕ್ಷೀಣಿಸಿರುವ ಕಾರಣ ಬೇಸಾಯಗಾರರು ಆತಂಕಕ್ಕೊಳಗಾಗಿದ್ದರು. ಬಿತ್ತನೆ ಮಾಡಿದವರು ನಾಟಿ ಪೂರೈಸಿದವರು ಗದ್ದೆ ಒಣಗಬಹುದು ಎಂಬ ಚಿಂತೆಯಲ್ಲಿದ್ದರು. ಸೂಕ್ತ ಕಾಲದಲ್ಲಿ ಮುಂಗಾರುಮಳೆ ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವುದರಿಂದ ಕೃಷಿಕರ ರೈತರ ಆತಂಕ ದೂರಾಗಿದೆ.