ಮೂಕಪ್ರಾಣಿಗಳೊಂದಿಗೆ ನಮ್ಮ ಮನದಾಳವನ್ನು ಹಂಚಿಕೊಳ್ಳುವುದು ಅದ್ಭುತ- ಕಂಗನಾ ರಣಾವತ್

Public TV
2 Min Read
KANGANA 1

ಮುಂಬೈ: ಸದಾ ಸುದ್ದಿಯಲ್ಲಿರುವ ಬಾಲಿವುಡ್ ಚೆಲುವೆ ಕಂಗನಾ ರಣಾವತ್ ಇದೀಗ ಕುದುರೆ ಸವಾರಿ ಮಾಡುವ ವೀಡಿಯೋ ವೈರಲ್ ಆಗಿದೆ.

kangana 2 medium

ಕಂಗನಾ ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ತುತ್ತಾಗಿ ದೀರ್ಘಾವಧಿಯ ವಿಶ್ರಾಂತಿಯಲ್ಲಿದ್ದರು. ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿರುವ ಅವರು ಮನಾಲಿಯಿಂದ ಮುಂಬೈಗೆ ಬಂದಿಳಿದಿದ್ದು, ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋಟಿ ಸುಖಕ್ಕಿಂತ ಅಮ್ಮನ ಮಡಿಲೇ ಮೇಲು: ಕಂಗನಾ

ಇದೀಗ ಕಂಗನಾ ಭರ್ಜರಿಯಾಗಿ ಕುದುರೆ ಸವಾರಿ ಮಾಡುವ ಮೂಲಕ ಹೊಸ ಚೈತನ್ಯವನ್ನು ಕಂಡುಕೊಂಡಿದ್ದಾರೆ. ಮುಂಬೈನಲ್ಲಿ ಮಳೆ ಸುರಿಯುವುದಕ್ಕೆ ಶನಿವಾರ ಕೊಂಚ ವಿರಾಮ ಸಿಕ್ಕಿತ್ತು. ಇದೇ ವೇಳೆ ಕುದುರೆ ಸವಾರಿ ನಡೆಸಿದ ಕಂಗನಾ, ಇನ್‍ಸ್ಟಾಗ್ರಾಮ್ ಹಾಗೂ ಕೂನಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.

dbhghmj medium

ತಲೈವಿ ಚಿತ್ರಕ್ಕಾಗಿ ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದೆ. ಬಹಳ ದಿನಗಳ ನಂತರ ಕುದುರೆ ಸವಾರಿ ಮಾಡಿದೆ. ಮೂಕಪ್ರಾಣಿಗಳೊಂದಿಗೆ ನಮ್ಮ ಮನದಾಳವನ್ನು ಹಂಚಿಕೊಳ್ಳುವುದಕ್ಕೆ ಇದೊಂದು ಅದ್ಭುತ ಉದಾಹರಣೆ. ಕುದುರೆ ಸವಾರಿಯಿಂದ ನನಗೆ ತುಂಬಾ ಖುಷಿಯಾಯಿತು ಎಂದು ಬರೆದುಕೊಂಡಿದ್ದಾರೆ.

ಕಂಗನಾ ರಣಾವತ್ ಅಮ್ಮನ ಮಡಿಲಲ್ಲಿ ಹಾಯಾಗಿ ಕಾಲ ಕಳೆಯುತ್ತಿರುವ ಸಂತೋಷದ ಕ್ಷಣಗಳನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವುದಿನಗಳ ಹಿಂದೆ ಹಂಚಿಕೊಂಡಿದ್ದರು. ಇಡೀ ಜಗತ್ತಿನ ಖುಷಿ ಒಂದ್ಕಡೆಯಾದ್ರೆ, ಅಮ್ಮನ ಮಮತೆಯ ಮಡಿಲು ಇನ್ನೊಂದು ಕಡೆ ಎಂದು ಕ್ಯಾಪ್ಶನ್ ಕೊಟ್ಟು ಅಮ್ಮ ಕೈಯಿಂದ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಕೊರೊನಾ ಸೋಂಕಿನಿಂದ ವಾಸಿಯಾದ ಕಂಗನಾ ಮುಂಬೈ ಬಿಟ್ಟು ತಮ್ಮ ತವರೂರಲ್ಲಿ ಕೆಲವು ದಿನಗಳನ್ನು ಕಳೆದಿದ್ದರು. ಹಿಮಾಚಲದಲ್ಲಿ ತಮ್ಮ ಕುಟುಂಬದ ಜೊತೆಗೆ ಕಾಲಕಳೆಯುತ್ತಿದ್ದವರು ಮತ್ತೆ ಮುಂಬೈಗೆ ಮರಳಿದ್ದಾರೆ.

ಸಣ್ಣ ಪುಟ್ಟ ವಿಚಾರಗಳಿಗೆ ತಗಾದೆ ಎತ್ತುವ ಮೂಲಕವಾಗಿ ಸದಾ ಸುದ್ದಿಯಲ್ಲಿರುವ ಕಂಗನಾ ಅವರ ಈ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಂಗನಾ ಟ್ವಿಟ್ಟರ್ ಖಾತೆ ನಿಷ್ಕ್ರಿಯಗೊಂಡ ಮೇಲೆ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *