ವಿಕ್ರಾಂತ್ ರೋಣ ಸಿನಿಮಾ ನೋಡ್ತಾಯಿದ್ರೆ ಜೀವ ನಡುಗುತ್ತೆ: ನಟ ರವಿಶಂಕರ್ ಗೌಡ

Public TV
2 Min Read
RAVISHANKAR GOWDA

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ಸಿನಿಮಾ ಡಬ್ಬಿಂಗ್‍ನಲ್ಲಿ ಭಾಗವಹಿಸಿದ ನಟ ರವಿಶಂಕರ್ ಗೌಡ ಸಿನಿಮಾ ಕುರಿತಾಗಿ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದಾರೆ.

VIKRANTH RONA

ವಿಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾಧ್ಯವಿಲ್ಲ ಕುತೂಹಲದ ಮಹಾಪೂರವಾಗಿದೆ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲ. ಹೊಸ ಕಲಾವಿದರು ಅಚ್ಚುಕಟ್ಟಾದ ಅಭಿನಯಿಸಿದ್ದಾರೆ. ಎಂದು ರವಿಶಂಕರ್ ಗೌಡ ಡಬ್ಬಿಂಗ್ ಮಾಡಿದ ಅನುಭವವನ್ನು ಟ್ವೀಟ್ ಮಾಡಿದ್ದಾರೆ.

ಪೂರ್ತಿ ಸಿನಿಮಾ ನೋಡುತ್ತಿದ್ದರೆ ಜೀವ ನಡುಗತ್ತದೆ. ನಿರ್ದೇಶಕ ಅನೂಪ್ ಭಂಡಾರಿಗೆ ಹಾಗೂ ನಿರ್ಮಾಪಕ ಜಾಕ್ ಮಂಜು ಸರ್‌ಗೆ ಅಭಿನಂದನೆಗಳು ಎಂದು ರವಿಶಂಕರ್ ಗೌಡ ವಿಕ್ರಾಂತ್ ರೋಣ ಸಿನಿಮಾದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್ ಭಂಡಾರಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ಅಶೋಕ್ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಂಬಾ ವಿಶೇಷವಾದ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಗೌಡ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಜಾಕ್ ಮಂಜು ನಿರ್ಮಾಣ ಮಾಡಿದ್ದು, ಬಿಡುಗಡೆ ಬಗ್ಗೆ ಸದ್ಯಕ್ಕೆ ಯಾವುದೇ ಅಪ್‍ಡೇಟ್ ಇಲ್ಲ.

ಸಿನಿಮಾ ಆರಂಭದಿಂದಲೂ ಒಂದಲ್ಲ ಒಂದು ವಿಷಯಕ್ಕೆ ಕುತೂಹಲ ಹೆಚ್ಚಿಸುತ್ತಿರುವ ಈ ಚಿತ್ರ ಈಗ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಫಸ್ಟ್ ಲುಕ್ ಪೋಸ್ಟರ್ ಹಾಗೂ ದುಬೈನ ಬುರ್ಜ್ ಖಲೀಫಾ ಕಟ್ಟಡ ಮೇಲೆ ಬಿಡುಗಡೆಯಾದ ಟೀಸರ್ ನೋಡಿದ್ಮೇಲೆ ಪ್ರೇಕ್ಷಕರು ಬಹಳ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *