ರಾಜ್ಯದಲ್ಲಿ ಕಮಲ ಕ್ರಾಂತಿಯ ಮುನ್ಸೂಚನೆ ನೀಡಿದೆಯಾ ಬಿಜೆಪಿ ಹೈಕಮಾಂಡ್?

Public TV
2 Min Read
BJP 2

– ಕಮಲ ಅಂಗಳದಲ್ಲಿ ಬದಲಾವಣೆಯ ಕ್ರಾಂತಿ ಕಹಳೆ
– ದೆಹಲಿಯಲ್ಲಿ ನಡ್ಡಾ ಜೊತೆ ವಿಜಯೇಂದ್ರ ಮಾತುಕತೆ

ಬೆಂಗಳೂರು: ದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಡ್ಡಾ ಜೊತೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ನಡ್ಡಾ ಮಾತುಕತೆ ನಡೆಸಿದ್ದಾರೆ.

ಕೊರೊನಾ ಸಂಕಷ್ಟ ಕಡಿಮೆಯಾಗ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಮಹಾಪರ್ವವೇ ನಡೆಯಲಿದೆ ಎಂದು ಪಬ್ಲಿಕ್ ಟಿವಿ ಈ ಹಿಂದೆಯೇ ವರದಿ ಮಾಡಿತ್ತು. ಇದೀಗ ಈ ಸುದ್ದಿಗೆ ಪೂರಕ ಅನ್ನುವಂತೆ ದೆಹಲಿಗೆ ತೆರಳಿದ್ದ ವಿಜಯೇಂದ್ರ ಕೊನೆಗೆ ನಡ್ಡಾರನ್ನ ಭೇಟಿಯಾಗಿದ್ದಾರೆ. ಜೂನ್ ಕೊನೆ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಕಮಲ ಅಂಗಳದಲ್ಲಿ ಬದಲಾವಣೆ ಕ್ರಾಂತಿ ಕಹಳೆ ಮೊಳಗಲಿದೆ ಎನ್ನಲಾಗುತ್ತಿದೆ.

BJP 1 medium

ಮೂರು ದಿನಗಳ ಹಿಂದೆ ಆರ್‍ಎಸ್‍ಎಸ್ ನ ಉನ್ನತ ನಾಯಕರ ಜೊತೆ ಸಿಎಂ ಯಡಿಯೂಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಪಕ್ಷದ ಕೆಲವು ಚಟುವಟಿಕೆ, ಕೆಲವು ನಾಯಕರ ವಿರುದ್ಧ ಸಿಎಂ ಯಡಿಯೂರಪ್ಪ ದೂರು ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ನಾಯಕತ್ವ ಬದಲಾವಣೆಯನ್ನು ಪರೋಕ್ಷವಾಗಿ ಒಪ್ಪಿಕೊಂಡ ಸಚಿವ ಯೋಗೇಶ್ವರ್

Vijayendra J P Nadda medium

ರಾಜಕೀಯ ಕಡೇ ಘಟ್ಟದಲ್ಲಿ ಪಕ್ಷದ ಕೆಲವರು ಕೆಟ್ಟದಾಗಿ ರಾಜಕೀಯ ಮಾಡ್ತಿದ್ದಾರೆ. ಇದು ನನ್ನ ರಾಜಕೀಯ ಜೀವನದ ಕಪ್ಪುಚುಕ್ಕೆ ಆಗರಬಾರದು. ಕೂಡಲೇ ಮಧ್ಯಪ್ರವೇಶ ಮಾಡಿ ಒಂದು ಅಂತಿಮ ನಿರ್ಧಾರಕ್ಕೆ ಬರಲಿ. ಯಾವುದನ್ನೂ ತಿಳಿಸದೇ ಸುಖಾ ಸುಮ್ಮನೇ ನನ್ನ ಮೇಲೆ ಒಳಗಿನ ಪಿತೂರಿ ನಡೆಸುತ್ತಿದ್ದಾರೆ. ಹೈಕಮಾಂಡ್ ನಡೆ ಏನು ಅನ್ನೋದನ್ನ ಸ್ಪಷ್ಟಪಡಿಸಿ ಗೊಂದಲಗಳಿಗೆ ತೆರೆ ಎಳೆಯುಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Vijayendra J P Nadda 1 medium

ಜೂನ್ ಕೊನೆ ಅಥವಾ ಜುಲೈ ಮೊದಲ ವಾರದಲ್ಲಿಯೇ ಬಿಜೆಪಿ ಹೈಕಮಾಂಡ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ಬಿಸಿ ಮುಟ್ಟಿಸಲು ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಸಕ್ರಿಯರಲ್ಲದ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಮಣೆ ಹಾಕಿ ಆಡಳಿತಕ್ಕೆ ಚುರುಕು ಮುಟ್ಟಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗುತ್ತಿದೆ. ಹೈಕಮಾಂಡ್ ಸಂದೇಶದ ಬೆನ್ನಲ್ಲೇ ರಾಜ್ಯ ನಾಯಕರಿಗೆ ಢವ ಢವ ಶುರುವಾದಂತಿದೆ. ಇದನ್ನೂ ಓದಿ: ಸಿಎಂ ಬಿಎಸ್‍ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?

ಕಳೆದ ವಾರದಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬಂದಿತ್ತು. ಸಚಿವ ಸಿ.ಪಿ.ಯೋಗೇಶ್ವರ್ ಸಹ ಪರೋಕ್ಷವಾಗಿ ನಾಯತಕ್ವ ಬದಲಾವಣೆಯನ್ನ ಒಪ್ಪಿಕೊಂಡಿದ್ದರು. ಇದು ಶುದ್ಧ ಬಿಜೆಪಿ ಸರ್ಕಾರ ಅಲ್ಲ. ಮೂರು ಗುಂಪಿನ ಸರ್ಕಾರ. ರಾಮನಗರದಲ್ಲೇ ನನ್ನ ಮಾತು ನಡೀತಿಲ್ಲ. ಯಡಿಯೂರಪ್ಪ ಜೆಡಿಎಸ್, ಕಾಂಗ್ರೆಸ್ ಜೊತೆ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ನಲ್ಲಿ ತೊಡಗಿದ್ದಾರೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಆಪಾದಿಸಿದ್ದಾರೆ. ನನ್ನ ಇಲಾಖೆಯಲ್ಲಿ ಬಿವೈ ವಿಜಯೇಂದ್ರ ಹಸ್ತಕ್ಷೇಪ ಮಾಡ್ತಿದ್ದಾರೆ ಎಂದು ಪರೋಕ್ಷವಾಗಿ ದೂರಿದ್ದರು

Share This Article
Leave a Comment

Leave a Reply

Your email address will not be published. Required fields are marked *