Connect with us

ಸಿಎಂ ಬಿಎಸ್‍ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?

ಸಿಎಂ ಬಿಎಸ್‍ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರದ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದಲಾವಣೆ ವದಂತಿ ಹರಡಿದೆ. ದೆಹಲಿಗೆ ರಾಜ್ಯ ನಾಯಕರು ದಿಢೀರ್ ಭೇಟಿ ನೀಡುತ್ತಿರುವ ಬೆನ್ನಲ್ಲೇ ಜೂನ್ 7ರಂದು ಶಾಸಕಾಂಗ ಪಕ್ಷದ ಸಭೆ ಕರೆಯಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಕೈ ಹಾಕಿದೆ ಎಂಬ ಸುದ್ದಿ ಕೂಡ ಹರಡಿದೆ. ಇದೇ ವೇಳೆ, ಬಿಎಸ್‍ವೈ ವಿರೋಧಿ ಪಾಳಯ ಸಕ್ರಿಯವಾಗಿದ್ದು, ಸಹಿ ಸಂಗ್ರಹ ಕಾರ್ಯವನ್ನು ಮಾಡುತ್ತಿದೆ. ಇದು ತೆರೆಮರೆಯಲ್ಲಿ ನಡೆಯುತ್ತಿದ್ದು, ಶೀಘ್ರ ಬಿಜೆಪಿ ಹೈಕಮಾಂಡಿಗೆ ಸಹಿ ಸಂಗ್ರಹ ಪಟ್ಟಿ ರವಾನಿಸಲು ಪ್ಲಾನ್ ಮಾಡಿದೆ.

ಬಿಜೆಪಿಯಲ್ಲಿ ನಡೆಯುತ್ತಿರುವ ಒಳ ಜಗಳವನ್ನು ಕಂದಾಯ ಸಚಿವ ಆರ್. ಅಶೋಕ್ ಒಪ್ಪಿಕೊಂಡಿದ್ದಾರೆ. ನಾಯಕತ್ವ ಬದಲಾವಣೆಗೆ ಪಕ್ಷದಲ್ಲಿ ಚಟುವಟಿಕೆಗಳು ನಡೆಯುತ್ತಿರುವುದು ಹಂಡ್ರೆಡ್ ಪರ್ಸೆಂಟ್ ನಿಜ. ಕೆಲವರು ಸಚಿವರು, ಶಾಸಕರು ಭಾಗಿಯಾಗಿರುವ ಮಾಹಿತಿ ಇದ್ದು, ಸರ್ಕಾರಕ್ಕೆ ಆಕ್ಸಿಜನ್ ತರಲು ಕೆಲವರು ಹೊರಟಿದ್ದಾರೆ ಅಂತ ಹೇಳಿದ್ದಾರೆ. ಇನ್ನೊಂದೆಡೆ, ಗಣಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ದೇಶ ದೊಡ್ಡದು. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಅಂತ ಹೇಳಿದ್ದಾರೆ.

ಒಂದು ವೇಳೆ, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಆಸಕ್ತಿ ತೋರಿದ್ದರೂ ಸಿಎಂ ಯಡಿಯೂರಪ್ಪರನ್ನು ಅಷ್ಟೊಂದು ಸುಲಭವಾಗಿ ಕೆಳಗಿಸಲು ಅಸಾಧ್ಯವಾದ ಮಾತು. ಒಂದು ವೇಳೆ ಯಡಿಯೂರಪ್ಪರನ್ನು ಬಲವಂತದಿಂದ ಕೆಳಗಿಳಿಸಿದ್ರೆ ಪಕ್ಷ ಹಾಗೂ ಸರ್ಕಾರ ಏನಾಗುತ್ತೋ ಎಂಬ ಆತಂಕವೂ ಹೈಕಮಾಂಡ್‍ಗೆ ಇದೆ. ಹೀಗಾಗಿಯೇ ಬಿಎಸ್‍ವೈ ಮನವೊಲಿಸಿ ಪಟ್ಟದಿಂದ ಕೆಳಗಿಳಿಸಲು ಹೈಕಮಾಂಡ್ ಬಯಸ್ತಿದೆ.

ಹೈಕಮಾಂಡ್ ಮುಂದಿರೋ ಆಯ್ಕೆ ಏನು?
ಆಯ್ಕೆ 1 – ಬಿಎಸ್‍ವೈ ಮನವೊಲಿಸಿ ರಾಜೀನಾಮೆ ನೀಡಬಹುದು. ಹೀಗಾಗಿ ಗೌರವಯುತ ನಿರ್ಗಮನಕ್ಕೆ ಸೂಚಿಸಬಹುದು.
ಆಯ್ಕೆ 2 – ಜೂನ್ ಅಥವಾ ಜುಲೈವರೆಗೆ ಬಿಎಸ್‍ವೈಗೆ ಕಾಲಾವಕಾಶ ನೀಡುವುದು
ಆಯ್ಕೆ 3 – ಬಿಎಸ್‍ವೈ ಸೂಚಿಸಿದವರಿಗೆ ಪಟ್ಟ ಅಥವಾ ಸಮ್ಮತ ಉತ್ತರಾಧಿಕಾರಿ ಆಯ್ಕೆ
ಆಯ್ಕೆ 4 – ಸರ್ಕಾರಕ್ಕೆ ಇನ್ನೆರಡು ವರ್ಷ ಇರುವ ಕಾರಣ ಅಲ್ಲಿಯವರೆಗೆ ಮುಂದುವರೆಸಬಹುದು.

Advertisement
Advertisement