ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ದಿಢೀರ್ ಕೋವಿಡ್ ಅಸ್ಪತ್ರೆಗೆ ಅಪ್ಪಚ್ಚು ರಂಜನ್ ಭೇಟಿ

Public TV
2 Min Read
MDK APPACHU RANJAN

ಮಡಿಕೇರಿ: ಕೊರೊನಾ ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ಸರಿಯಾದ ಊಟ ನೀಡದೇ ನಿರ್ಲಕ್ಷ್ಯ ವಹಿಸಿದ್ದ ಕುರಿತು ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ದಿಢೀರ್ ಆಗಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

MDK 1

ಕೊರೊನಾ ಮಾಹಾಮಾರಿ ಕೊಡಗಿನಲ್ಲಿ ದಿನ ಕಳೆದಂತೆ ಏರಿಕೆ ಕಾಣುತ್ತಿದೆ. ಸೋಂಕಿತರ ಸಂಖ್ಯೆಯು ಕಳೆದ ಎರಡು ವಾರದಿಂದ ಹೆಚ್ಚಾಗುತ್ತಿದ್ದು, ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಕೋವಿಡ್ ಅಸ್ಪತ್ರೆಗಳಿಗೆ ದಾಖಲು ಮಾಡಲಾಗುತ್ತಿದೆ. ಆದರೆ ಅಲ್ಲಿ ಸೋಂಕಿತರನ್ನು ಸರಿಯಾಗಿ ಉಪಚರಿಸುತ್ತಿಲ್ಲ ಎಂಬ ಆರೋಪದ ಬೆನ್ನಲ್ಲೇ ಅಸ್ಪತ್ರೆಯ ಕರ್ಮಕಾಂಡವನ್ನು ನಿನ್ನೆ ಪಬ್ಲಿಕ್ ಟಿವಿ ಮುಖಾಂತರ ಸೋಂಕಿತರು ಬಿಚ್ಚಿಟ್ಟಿದ್ದರು.

ಮಡಿಕೇರಿ ನಗರದಲ್ಲಿ ಇರುವ ಕೋವಿಡ್ ಆಸ್ಪತ್ರೆಯಲ್ಲಿ ರಾತ್ರಿ ಹತ್ತು ಗಂಟೆಯಾದರೂ ಸೋಂಕಿತರಿಗೆ ಸರಿಯಾಗಿ ಊಟ ಸಿಗುತ್ತಿಲ್ಲ. ಹತ್ತು ಗಂಟೆ ಬಳಿಕ ಹಳಸಿದ ಅನ್ನ ಕೊಡುತ್ತಿದ್ದಾರೆಂದು ಊಟ ಕೊಡಲು ಬಂದ ಸಿಬ್ಬಂದಿಯನ್ನು ಪ್ರಶ್ನಿಸಿ ಸೋಂಕಿತರೊಬ್ಬರು ವೀಡಿಯೋ ಮಾಡಿ ಹರಿಬಿಟ್ಟಿದ್ದರು. ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಊಟ ನೀಡುವುದಿಲ್ಲ. ಕೊಟ್ಟರು ಅ ಊಟ ಹಳಸಿಹೋಗಿರುತ್ತದೆ. ಹೀಗಾಗಿ ಅಲ್ಲಿಯ ಸೋಂಕಿತರು ರೋಗಿಗಳು ಊಟ ಕೊಟ್ಟ ಎರಡು ನಿಮಿಷಕ್ಕೆ ಎಲ್ಲರೂ ಊಟ ಎಸೆಯುತ್ತಾರೆಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದರು.

MDK 2

ಇಂದು ಸ್ವತಃ ಮಡಿಕೇರಿ ಶಾಸಕ ಅಪ್ಪಚು ರಂಜನ್ ಮಡಿಕೇರಿಯ ಕೋವಿಡ್ ಅಸ್ಪತ್ರೆಗೆ ದಿಢೀರ್ ಬೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಕೋವಿಡ್ ಅಸ್ಪತ್ರೆ ರೋಗಿಗಳನ್ನು ಭೇಟಿ ಮಾಡುವ ಮುನ್ನ ಪಿಪಿಇ ಕಿಟ್ ಧರಿಸಿಕೊಂಡು ಪ್ರತಿ ವಾರ್ಡ್‍ನಲ್ಲಿ ಇರುವ ಸೋಂಕಿತರ ಅರೋಗ್ಯ ಮತ್ತು ಅಸ್ಪತ್ರೆಯ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾನಾತಾನಾಡಿದ ಅಪ್ಪಚ್ಚು ರಂಜನ್, ಪಬ್ಲಿಕ್ ಟಿವಿ ಮೂಲಕ ಅಸ್ಪತ್ರೆಯ ಸಮಸ್ಯೆಯನ್ನು ನಾನು ನೋಡಿದೆ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಗಳು ಸರಿ ಇದೆ. ಅದರೆ ಊಟದ ವ್ಯವಸ್ಥೆಯಲ್ಲಿ ಸ್ವಲ್ಪ ಏರುಪೇರು ಅಗಿದೆ. ಸೋಂಕಿತರಿಗೆ ಬಿಸಿಬಿಸಿ ಊಟ ಬಿಸಿ ನೀರು ಕೋಡಬೇಕು. ಸಿಬ್ಬಂದಿಗಳ ಕೊರತೆಯಿಂದ ಈ ರೀತಿಯ ಊಟದಲ್ಲಿ ವ್ಯತ್ಯಾಸ ಅಗಿದೆ. ನಾಳೆಯಿಂದಲೇ ಎಲ್ಲಾ ಸೋಂಕಿತರಿಗೂ ಸರಿಯಾದ ಊಟದ ವ್ಯವಸ್ಥೆ ಮಾಡಲು ಅಸ್ಪತ್ರೆಯ ಅಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *