ಮ್ಯಾಗಿ ಬಳಸಿಕೊಂಡು ಹಲವಾರು ರೀತಿಯ ಹೊಸ ಹೊಸ ಅಡುಗೆ ಪ್ರಯೋಗಗಳನ್ನು ಅನೇಕ ಮಂದಿ ಮಾಡಿರುವುದನ್ನು ನೋಡಿದ್ದೇವೆ. ಆದರೆ ಇದೀಗ ಯಾರೋ ಮ್ಯಾಗಿಯಿಂದ ಲಡ್ಡು ತಯಾರಿಸಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೌದು, ಇತ್ತೀಚೆಗೆ ಮ್ಯಾಗಿಯಿಂದ ತಯಾರಿಸಿದ ಲಡ್ಡು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ ಲಡ್ಡು ನೋಡಲು ಸಿಹಿ ಖಾದ್ಯದಂತೆ ಕಾಣಿಸುತ್ತಿದ್ದು, ಯಾರೋ ಮ್ಯಾಗಿಯಿಂದ ಲಡ್ಡು ತಯರಿಸಿದ್ದಾರೆ ಎಂದು ಟ್ವಿಟ್ಟರ್‍ನಲ್ಲಿ ಕ್ಯಾಪ್ಷನ್ ಹಾಕಿದ್ದಾರೆ.
Guys someone prepared maggi laddu on #Facebook pic.twitter.com/zhWB4oD12Q
— Sugar Cup???? (@Sonia177sweet) April 14, 2021
ಈ ಮ್ಯಾಗಿ ಲಡ್ಡುಗಳನ್ನು ಬೆಲ್ಲದ ಪಾಕದಿಂದ ಉಂಡೆ ಕಟ್ಟಿದಂತೆ ಕಾಣಿಸುತ್ತಿದ್ದು, ಲಡ್ಡು ಮೇಲೆ ಗೋಡಂಬಿಯನ್ನು ಇಟ್ಟು, ತಟ್ಟೆ ಮೇಲೆ ಇರಿಸಿರುವುದನ್ನು ನೋಡಬಹುದಾಗಿದೆ.