ಕಾರವಾರ: ಲಾರಿ ಮತ್ತು ವ್ಯಾಗನರ್ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವು ಕಂಡ ಘಟನೆ ಅಂಕೋಲಾದ ಹೆಬ್ಬುಳ ಬಳಿಯ ರಾ.ಹೆ.63 ರಲ್ಲಿ ನಡೆದಿದೆ.
ಸಂಜನಾ ಸುರೇಶ್ ರಾಯ್ಕರ್ (7), ಗುರುಪ್ರಸಾದ್ ಅಣ್ವೇಕರ್ (25) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಅಂಕೋಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಾರಾಷ್ಟ್ರದಿಂದ ಅಂಕೋಲಾದ ಅವರ್ಸಾ ಕಡೆ ಬರುತ್ತಿದ್ದ ಕಾರು, ಅಂಕೋಲಾದಿಂದ ಹುಬ್ಬಳ್ಳಿ ಕಡೆ ತೆರಳುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಭಾರೀ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.