ಬಿಗ್‍ಬಾಸ್ ಮನೆಯಲ್ಲಿ ರಘು ತರಕಾರಿ ಮಂಡಿಯನ್ನು ತೆರೆದಿದ್ದಾರೆ. ಈ ವಿಚಾರವಾಗಿ ಸುದೀಪ್ ಇಂದು ಸೂಪರ್ ಸಂಡೆ ವಿತ್ ಸುದೀಪದಲ್ಲಿ ಮಾತನಾಡಲಿದ್ದಾರೆ.
ಹೌದು ಕಳೆದವಾರ ನೀಡಲಾದ ಜೋಡಿ ಟಾಸ್ಕ್‍ನಲ್ಲಿ ಮನೆಯ ಸದಸ್ಯರನ್ನು ಜೋಡಿ ಮಾಡಲಾಗಿತ್ತು. ಈ ವೇಳೆ ವೈಷ್ಣವಿ, ರಘು ಒಂದು ಜೋಡಿಯಾಗಿ ಆಟ ಆಡುತ್ತಿದ್ದರು. ರಿಚಾರ್ಜ್ ಸ್ಟಿಕ್ ಎಲ್ಲಿದೆ ಅಂತ ತಿಳಿದುಕೊಳ್ಳಲು ವೈಷ್ಣವಿಯನ್ನ ಮಂಜು ನಿಧಾನವಾಗಿ ಪಕ್ಕಕ್ಕೆ ಕರೆತಂದು ವಿಚಾರಿಸುತ್ತಿದ್ದರು. ವೈಷ್ಣವಿ ಮಾಹಿತಿ ನೀಡಿದ್ರೆ ಹೇಗೆ ಅಂತ ರಘು ಇಬ್ಬರನ್ನ ಹಿಂಬಾಲಿಸುತ್ತಿದ್ದರು.ಇದನ್ನು ಗಮನಿಸಿದ ಲ್ಯಾಗ್ ಮಂಜು ನೋಡಪ್ಪಾ.. ಬೆಳ್ಳುಳ್ಳಿ ಹಿಂದೆ ಈರುಳ್ಳಿ ಬರುತ್ತಿದೆ ಎಂದು ತಮಾಷೆ ಮಾಡಿದ್ದರು.
ಈ ವಿಚಾರವನ್ನು ಸುದೀಪ್ ವಾರದ ಕಥೆಯ ಕಿಚ್ಚನ ಪಂಚಾಯ್ತಿ ಕಟ್ಟೆಯಲ್ಲಿ ಮಾತನಾಡಿದ್ದಾರೆ. ಈರುಳ್ಳಿ, ಬೆಳ್ಳಿಯ ಕಥೆಯನ್ನು ಹೇಳಿದ್ದಾರೆ. ಈ ವೇಳೆ ರಘು ಅವರಿಗೆ ಈ ಮನೆಯಲ್ಲಿರುವ ಸದಸ್ಯರನ್ನು ಯಾವ ಯಾವ ತರಕಾರಿಗೆ ಹೋಲಿಸುತ್ತಿರಾ ಎಂದು ರಘು ಅವರನ್ನು ಕೇಳಿದ್ದಾರೆ.
ಬಿಗ್‍ಬಾಸ್ ಮನೆಯಲ್ಲಿದೆ ವೆರೈಟಿ ವೆರೈಟಿ ತರಕಾರಿ!
ದಿವ್ಯ ಸುರೇಶ್ ಮೆಣಸಿನ ಕಾಯಿ, ಶಂಕರ್ ಅವರು ಹಾಗಲಕಾಯಿ ಅವರಿಗೆ ಏನ್ ಆದರೂ ಉಲ್ಟಾ ಹೊಡೆದರೆ ಅವರು ತುಂಬಾ ಕಹಿಯಾಗುತ್ತಾರೆ. ನಿಧಿ ಅವರು ಕ್ಯಾಪ್ಸಿಕಂ ಅವರನ್ನು ಬಜ್ಜಿ ಮಾಡಕೊಂಡು ತಿನ್ನಬಹುದು ಎಂದು ಹೇಳುತ್ತಾ ರಘು ಅವರದ್ದೆ ಶೈಲಿಯಲ್ಲಿ ಜೋಕ್ ಮಾಡಿದ್ದಾರೆ. ರಘು ಅವರ ತರಕಾರಿ ಮಳಿಗೆ ವಿಚಾರವನ್ನು ಕೇಳಿದ ಮನೆ ಮಂದಿ ನಕ್ಕಿದ್ದಾರೆ.
ಶಮಂತ್ ಅವರನ್ನು ಯಾವ ತರಕಾರಿ ಹೋಲಿಸ್ತೀರಾ ಎಂದು ಸುದೀಪ್ ಕೇಳಿದಾಗ ರಘು ಸೆಪ್ಪೆ ಮೊರೆ ಹಾಕಿ ಕೊಂಡು ಬದನೆಕಾಯಿ ಸರ್ ಎಂದಿದ್ದಾರೆ. ಆಗ ಸುದೀಪ್ ಅಂದರೆ ವಿಷಯ ಇಲ್ಲಾ ಅಂತನಾ ಎಂದು ಜೋಕ್ ಮಾಡಿದ್ದಾರೆ. ಈ ವೇಳೆ ಮನೆಯ ಮಂದಿ ನಗೆಗಡಿಲಿನಲ್ಲಿ ತೇಲಾಡಿದ್ರು.