ಮುಂಬೈ: ಬಾಲಿವುಡ್ ಗುಳಿ ಕೆನ್ನೆ ಹುಡುಗಿ, ಬದ್ರಿನಾಥನ ದುಲ್ಹನಿಯಾ ಆಲಿಯಾ ಭಟ್ ಬಿಕಿನಿ ಧರಿಸಿ ಸ್ವಿಮಿಂಗ್ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶನಿವಾರ ಇನ್‍ಸ್ಟಾಗ್ರಾಂನಲ್ಲಿ ಈಜಾಡುತ್ತಿರುವ ಫೋಟೋವನ್ನ ಆಲಿಯಾ ಭಟ್ ಹಂಚಿಕೊಂಡಿದ್ದಾರೆ. ಫೋಟೋಗೆ 19 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಈ ಹಿಂದೆ ಬೀಚ್‍ನಲ್ಲಿ ಬಿಕಿನಿ ತೊಟ್ಟ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಹಳೆಯ ನೆನಪುಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ಆ ದಿನಗಳು ಬೆಸ್ಟ್ ಆಗಿದ್ದವು ಎಂದು ಬರೆದು ಮತ್ಸ್ಯಕನ್ನೆಯಂತೆ ವಿಹರಿಸುವ ಆಲಿಯಾ ಝಲಕ್ ಹುಡುಗರ ಹಾರ್ಟ್ ನಲ್ಲಿ ಸಾವಿರ ವೋಲ್ಟ್ ವಿದ್ಯುತ್ ಪ್ರವಹಿಸಿದಂತಾಗಿದೆ. ಫೋಟೋಗೆ ಲೈಕ್ಸ್ ಜೊತೆಗೆ ಸಾವಿರಾರು ಕಮೆಂಟ್ ಗಳು ಬಂದಿವೆ. ಆಲಿಯಾ ಫುಲ್ ಹಾಟ್, ನೈಸ್ ಪಿಕ್, ನೀರಿನಲ್ಲಿ ಬೆಂಕಿ ಹಚ್ಚಿದ ಆಲಿಯಾ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದರು.
View this post on Instagram
ರಣ್‍ಬೀರ್ ಕಪೂರ್ ಜೊತೆಗಿನ ಬ್ರಹ್ಮಾಸ್ತ್ರ ತೆರೆಗೆ ಸಿದ್ಧವಾಗಿದೆ. ಇತ್ತ ಗಂಗೂಬಾಯಿ ಸಿನಿಮಾದಲ್ಲಿ ಪಕ್ಕಾ ದೇಶಿ ಮಹಿಳೆಯಾಗಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಆಲಿಯಾ ಹುಟ್ಟುಹಬ್ಬದ ದಿನದಂದು ಆರ್‍ಆರ್‍ಆರ್ ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿರುವ ಆಲಿಯಾ ಅವರನ್ನ ರಾಜಮೌಳಿ ಪರಿಚಯಿಸಿದ್ದರು.
View this post on Instagram