ಕೋಲ್ಕತ್ತಾ: ಕಳೆದ ರಾತ್ರಿ ವಾಟ್ಸಪ್, ಫೆಸ್ಬುಕ್ ಹಾಗೂ ಇನ್‍ಸ್ಟಾಗ್ರಾಮ್ 50-55 ನಿಮಿಷಗಳ ಕಾಲ ಡೌನ್ ಆಗಿದ್ದು ಎಲ್ಲರನ್ನೂ ಚಿಂತಿಗೀಡು ಮಾಡಿತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿ, ನಂಬಿಕೆ, ಕನಸುಗಳೇ 50-55 ವರ್ಷ ಡೌನ್ ಆಗಿವೆ. ನಾನು ನಿಮ್ಮ ಅಸಹನೆಯನ್ನು ಅರ್ಥಮಾಡಿಕೊಳ್ಳಬಲ್ಲೆ. ಶೀಘ್ರದಲ್ಲೇ ಬದಲಾವಣೆ ತರುವ ನಿಮ್ಮ ತುಡಿತ ಈಡೇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪರೀಕ್ಷವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.
हम सिर्फ बंगाल में कमल ही नहीं खिलाना चाहते, बल्कि बंगाल के लोगों का भविष्य उज्ज्वल बनाना चाहते हैं।
दिल्ली की ताकत और बंगाल की ताकत वाले दोनों इंजन जब एक दिशा में लगेंगे, तब जाकर बंगाल बर्बादी से बाहर निकलेगा। pic.twitter.com/2tyXmzUmiK
— Narendra Modi (@narendramodi) March 20, 2021
ಪಶ್ಚಿಮ ಬಂಗಾಳದ ಖರಗ್‍ಪುರದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ವಿರುದ್ಧ ಕಡುವಾಗಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಜನರು ಆಕೆಯನ್ನು ನಂಬಿದ್ದರು. ಆದರೆ ಅವರು ದ್ರೋಹ ಮಾಡಿದರು. ಕೇಂದ್ರದ ಯೋಜನೆಗಳನ್ನು ತಡೆಯಲು ಮಮತಾ ಬ್ಯಾನರ್ಜಿಯವರು ಗೋಡೆಯಂತೆ ಅಡ್ಡ ನಿಂತಿದ್ದಾರೆ. ಬಿಜೆಪಿಯೊಂದೇ ಬಂಗಾಳದ ನಿಜವಾದ ಪಕ್ಷ ಎಂದರು.
ಮಮತಾ ಬ್ಯಾನರ್ಜಿ ಬಂಗಾಳದ ಯುವಕರ ಅಮೂಲ್ಯವಾದ 10 ವರ್ಷಗಳನ್ನು ಹಾಳು ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಕಿರುಕುಳ, ತೊಂದರೆ ನೀಡುವುದನ್ನು ಕಲಿಸುವ ತರಬೇತಿ ಕೇಂದ್ರವಾಗಿದೆ. ಅವರ ಪಕ್ಷ ಕ್ರೌರ್ಯದ ಶಾಲೆಯಾಗಿದೆ, ತೋಲಾಬಾಜಿ ಅವರ ಪಠ್ಯವಾಗಿದೆ. ಕಟ್-ಮನಿ, ಸಿಂಡಿಕೇಟ್ ಹಾಗೂ ಜನರಿಗೆ ಕಿರುಕುಳ ಹಾಗೂ ತೊಂದರೆ ನೀಡುವ ತರಬೇತಿ ಕೇಂದ್ರವಾಗಿದೆ ಎಂದು ಅವರು ಹೇಳಿದರು.
मैं बंगाल के नौजवानों, माताओं-बहनों, दलितों, आदिवासियों, पिछड़ों और गरीबों को भरोसा देता हूं… pic.twitter.com/gQTrSzrKJB
— Narendra Modi (@narendramodi) March 20, 2021
ಬಂಗಾಳದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿ ಸರ್ಕಾರದ ಅಗತ್ಯವಿದೆ. ಪಕ್ಷದ 130 ಕಾರ್ಯಕರ್ತರು ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಆದರೂ ದೀದಿ ಖೆಲಾ ಹೋಬೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಇಡೀ ಬಂಗಾಳ ಖೇಲಾ ಸೇಶ್ ಹೋಬೆ, ವಿಖಾಸ್ ಆರಂಭೋ ಹೋಬೆ ಎಂದು ಉತ್ತರಿಸುತ್ತಿದೆ. ಓಟ್ ಬ್ಯಾಂಕ್‍ಗಾಗಿ ಅವರು ಆಡುತ್ತಿರುವ ಆಟ ನಡೆಯುವುದಿಲ್ಲ ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದರು.
ಕಾಂಗ್ರೆಸ್, ಟಿಎಂಸಿ ಬಂಗಾಳದ ಅಭಿವೃದ್ಧಿಯನ್ನು ದಶಕಗಳಿಂದ ಸ್ಥಗಿತಗೊಳಿಸಿವೆ. 70 ವರ್ಷಗಳ ವಿನಾಶವನ್ನು ತೊಡೆದುಹಾಕಲು ಬಿಜೆಪಿಗೆ 5 ವರ್ಷ ಕಾಲಾವಕಾಶ ನೀಡಿ ಎಂದು ಪ್ರಧಾನಿ ಮೋದಿ ರಾಜ್ಯದ ಜನರ ಬಳಿ ಮನವಿ ಮಾಡಿದರು. ಅಲ್ಲದೆ ಕಾಂಗ್ರೆಸ್ ಹಾಗೂ ಟಿಎಂಸಿಗೆ ಅವಕಾಶ ಕೊಟ್ಟಿದ್ದೀರಿ ನಮಗೂ ಒಂದು ಅವಕಾಶ ಕೊಡಿ 70 ವರ್ಷಗಳ ವಿನಾಶದಿಂದ ನಿಮ್ಮನ್ನು ಮುಕ್ತಿಗೊಳಿಸುತ್ತೇವೆ. ನಿಮಗಾಗಿ ನಮ್ಮ ಜೀವವನ್ನೇ ಪಣಕ್ಕಿಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.
आज दीदी से पश्चिम बंगाल के लोग दस साल का हिसाब मांग रहे हैं, लेकिन जवाब देने की बजाय वे उन पर अत्याचार कर रही हैं। pic.twitter.com/3kby1jbcui
— Narendra Modi (@narendramodi) March 20, 2021
ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 29ರಿಂದ ಏಪ್ರಿಲ್ 29ರ ವರೆಗೆ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.