ವಧುದಕ್ಷಿಣೆ ಬದಲಾಗಿ 46,000 ರೂ. ಮೌಲ್ಯದ ಪುಸ್ತಕಕ್ಕೆ ಬೇಡಿಕೆ ಇಟ್ಟ ವಧು!

Public TV
1 Min Read
pakistan women

ಇಸ್ಲಾಮಾಬಾದ್: ಪಾಕಿಸ್ತಾನದ ಮದುಮಗಳು ವಧುದಕ್ಷಿಣೆ ರೂಪದಲ್ಲಿ ನೀಡುವ ಹಣ ಹಾಗೂ ಆಭರಣಗಳ ಬದಲಾಗಿ ಪಿಕೆಆರ್ 1,00,000(46,600 ರೂ.) ಮೌಲ್ಯದ ಪುಸ್ತಕ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಪಾಕಿಸ್ತಾನದ ಮರ್ದಾನ್ ನಗರದ ನೈಲಾ ಶಮಾಲ್ ಎಂಬವರು ತಮ್ಮ ವಿವಾಹದಲ್ಲಿ ಈ ರೀತಿಯ ಬೇಡಿಕೆ ಇಡಲು ಹಲವಾರು ಉದಾಹರಣೆಗಳನ್ನು ನೀಡಿದ್ದಾರೆ.

marriage money

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ನೈಲಾ, ಹಣ ಹಾಗೂ ಆಭರಣದ ಬದಲಾಗಿ ಪುಸ್ತಕ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ವೀಡಿಯೋದಲ್ಲಿ ನೈಲಾ ಮದುಮಗಳ ವಸ್ತ್ರ ಧರಿಸಿರುವುದನ್ನು ಕಾಣಬಹುದಾಗಿದೆ. ನಾನು ಹಕ್ ಮೆಹರ್ ಪಿಕೆಆರ್ 1,00,000 ಮೌಲ್ಯದ ಪುಸ್ತಕಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದೇನೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ನಾವು ದುಬಾರಿ ಉಡುಗೊರೆಗಳನ್ನು ಖರೀದಿಸಲು ಆಗುತ್ತಿಲ್ಲ. ಮತ್ತೊಂದು ನಮ್ಮ ಸಮಾಜದಲ್ಲಿರುವ ತಪ್ಪಾದ ಪದ್ಧತಿಗಳನ್ನು ತೊಡೆದು ಹಾಕುವುದಾಗಿದೆ ಎಂದು ಹೇಳಿದ್ದಾರೆ.

Marriage muslim 2

ನಾನು ಓರ್ವ ಬರಹಗಾತಿಯಾಗಿದ್ದು ಪುಸ್ತಕಗಳಿಗೆ ಬೆಲೆ ನೀಡಲಿಲ್ಲ ಎಂದರೆ ಇನ್ನೂ ಸಾಮಾನ್ಯ ಜನರು ಹೇಗೆ ಪುಸ್ತಕಗಳಿಗೆ ಬೆಲೆ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಈ ರೀತಿಯಾದಂತಹ ಬೇಡಿಕೆ ಇಡಲು ಮುಖ್ಯ ಕಾರಣ, ನಾನು ಹಕ್ ಮೆಹರ್ ನಲ್ಲಿ ಪುಸ್ತಕಗಳಿಗೆ ಬೆಲೆ ಕೊಟ್ಟು, ಇತರರಿಗೂ ಸಲಹೆ ನೀಡುವುದಾಗಿದೆ ಎಂದು ನುಡಿದರು.

ಸದ್ಯ ಈ ವೀಡಿಯೋವನ್ನು ನೈಲಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವಧು ಮತ್ತು ವರ ಇಬ್ಬರೂ ಬರಹಗಾರರು ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *