4 ಶಾಲೆಯ ಮಕ್ಕಳಿಗೆ ಟ್ಯಾಬ್ ವಿತರಿಸಿದ ಕೆಹೆಚ್ ಪುಟ್ಟಸ್ವಾಮಿಗೌಡ

Public TV
1 Min Read
CKB 1 1

ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ಕಾರ್ಯ ಇಂದು ಸಹ ಮುಂದುವರಿದಿದೆ.

CKB 1 1

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಾದಲವೇಣಿ, ಕುರೂಡಿ, ರಮಾಪುರ ಹಾಗೂ ಹುದುಗೂರು ಶಾಲೆಯ ವಿದ್ಯಾರ್ಥಿಗಳಿಗೆ ಇಂದು ಕೆಹೆಚ್‍ಪಿ ಫೌಂಡೇಶನ್ ಅಧ್ಯಕ್ಷ ಕೆಹೆಚ್ ಪುಟ್ಟಸ್ವಾಮಿಗೌಡ ಉಚಿತ ಟ್ಯಾಬ್ ಗಳನ್ನ ವಿತರಿಸಿದರು. ಈ ಹಿಂದೆ ಸಹ 4 ಶಾಲೆಯ 410 ಮಕ್ಕಳಿಗೆ 205 ಟ್ಯಾಬ್ ವಿತರಿಸಿದ್ದ ಪುಟ್ಟಸ್ವಾಮಿಗೌಡ ಅವರು ಇಂದು ಸಹ 4 ಶಾಲೆಯ 175 ಮಕ್ಕಳಿಗೆ 87 ಟ್ಯಾಬ್ ವಿತರಿಸಿದರು.

CKB 1 2

ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮ ಜನಮೆಚ್ಚುಗೆಗೆ ಪಾತ್ರವಾಗಿ ಯಶಸ್ವಿಯಾಗಿ ಸಾಗುತ್ತಿದ್ದು, ಸರ್ಕಾರಿ ಶಾಲೆಯ ಹತ್ತನೇ ತರಗತಿಯ ಮಕ್ಕಳು ಈ ಬಾರಿ ಟ್ಯಾಬ್ ಸಹಾಯದಿಂದ ಅತೀ ಹೆಚ್ಚಿನ ಅಂಕ ಪಡೆದು ಪಾಸಾಗುವುದರ ಜೊತೆಗೆ ಶಾಲೆಗೆ ಹೆತ್ತ ತಂದೆ-ತಾಯಿಗೆ ಕೀರ್ತಿ ತರುವಂತೆ ವಿದ್ಯಾರ್ಥಿಗಳಿಗೆ ಪುಟ್ಟಸ್ವಾಮಿಗೌಡ ಹಿತನುಡಿಗಳನ್ನ ತಿಳಿಸಿದರು.

e7baaf03 07bb 46e8 83bf 4f121dd5de81

ಪಬ್ಲಿಕ್ ಟಿವಿಯ ಸಮಾಜಮುಖಿ ಕಾರ್ಯಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಅಭಿನಂದನೆಗಳನ್ನ ಸಲ್ಲಿಸಿದರು.

Share This Article
Leave a Comment

Leave a Reply

Your email address will not be published. Required fields are marked *