ಬೆಂಗಳೂರು: ಬಿಗ್‍ಮನೆಯ ವಾರಾಂತ್ಯದ ಕಟ್ಟಾ ಪಂಚಾಯತಿಯಲ್ಲಿ ಮನೆಯ ಸರಿ ತಪ್ಪುಗಳನ್ನು ತಿಳಿಹೇಳುವ ಕೆಲಸವನ್ನು ಸುದೀಪ್ ಮಾಡುತ್ತಾರೆ. ಕಟ್ಟೆ ಪಂಚಾಯ್ತಿಯಲ್ಲಿ ಹೆಚ್ಚು ಚರ್ಚೆಯಾಗಿದ್ದು ಟೀ. ಮನೆಯವರಿಂದ ಕೇಳಿ ವಿಭಿನ್ನವಾದ ಟೀ ಮಾಡುವುದನ್ನು ಕಿಚ್ಚಾ ಕಲಿತುಕೊಂಡಿದ್ದಾರೆ.
ಇಲ್ಲಿಯವರೆಗೆ ಬೇರೆ ತರಹದ ಪಾತ್ರಗಳನ್ನು ಬಿಗ್ ಮನೆಯಲ್ಲಿ ನೋಡಿದ್ದೇನೆ. ಆದರೆ ಈ ಭಾರೀ ಭಯಂಕರವಾಗಿದ್ದಾರೆ. ಯೋಗ ಮಾಡ್ತಾ ಟೀ ಕುಡಿಯೋದು, ಅರ್ಧರಾತ್ರಿಯಲ್ಲಿ ಮೇಕಪ್ ಹಾಕಿ ಕ್ಯಾಮೆರಾ ಮುಂದೆ ಮಾತನಾಡುತ್ತಾರೆ, ಮೇಕಪ್ ಹಾಕಿ ಸ್ನಾನಕ್ಕೆ ಹೋಗುತ್ತಾರೆ. ವಿಭಿನ್ನವಾಗಿ ಟೀ ಮಾಡುತ್ತಾರೆ ನಾನು ಉಳಿದ ಸೀಸನ್‍ಗಳಲ್ಲಿ ನೋಡಿದ್ದಕ್ಕಿಂತ ವಿಭಿನ್ನವಾಗಿದ್ದಿರಾ ನೀವೆಲ್ಲಾ ಮಾವ ಹೇಳಿ ಟೀ ಮಾಡೋದು ಎಂದಿದ್ದಾರೆ.
ಒಳ್ಳೆ ಟೀ ಮಾಡೋದು ಹೇಗೆ..?
ಪ್ರಶಾಂತ್ ಸಂಬರ್ಗಿ ಅವರದ್ದೇ ಆಗಿರುವ ಹೊಸ ರೀತಿಯಲ್ಲಿ ಟೀ ಮಾಡುವ ರೀತಿಯನ್ನು ಹೇಳಿದ್ದಾರೆ. ಈ ವೇಳೆ ಪ್ರಶಾಂತ್ ಅವರ ಮಾತಿನ ಮಧ್ಯೆ ಪ್ರವೇಶಿಸಿದ ಕಿಚ್ಚ ಸುದೀಪ್ ಹಾಲು ನೀರು ಮಿಕ್ಸ್ ಮಾಡಿದರೆ ವಿಷ ಆಗುತ್ತೆ ಅಲ್ಲವಾ.. ನಾನು ಮಧ್ಯಪ್ರೇಶ ಮಾಡಿ ಅಧಿಕ ಪ್ರಸಂಗ ಮಾಡುತ್ತೇನೆ ಎಂದು ಹೇಳುತ್ತಾ ಸಂಬರ್ಗಿ ಅವರಿಗೆ ಚಮಕ್ ಕೊಟ್ಟಿದ್ದಾರೆ.
ಲ್ಯಾಗ್ ಮಂಜು ಟೀಗೆ ನನ್ನ ಕರಿಬೇಡಿ..!
ಲ್ಯಾಗ್ ಮಂಜು ತಂದೂರಿ ಟೀ ಮಾಡುವ ವಿಧಾನವನ್ನು ಕೇಳಿದ ಸುದೀಪ್ ಈ ಟೀ ಇವತ್ತೆ ಕುಡಿಯೋದಾ ಅಥವಾ ನಾಳೆ ಕುಡಿಯೋದಾ? ದಯವಿಟ್ಟು ನಿಮ್ಮ ಮನೆಗೆ ಟೀಗೆ ಮಾತ್ರ ನನ್ನ ಕರೆಯಬೇಡಿ ಎಂದು ಹೇಳಿ ಜೋಕ್ ಮಾಡಿದ್ದಾರೆ.
ಶುಭ ಪೂಂಜಾ ಹೇಳಿದ್ರೂ ಕ್ಯೂಟ್ ಟೀ:
ಶುಭ ನೀವು ಹೇಗೆ ಟೀ ಮಾಡುತ್ತಿರಾ ಎಂದು ಕಿಚ್ಚಾ ಕೆಳಿದ್ದಾರೆ. ಆಗ ಶುಭ ಅವರು ಅವರದ್ದೇ ಆಗಿರುವ ಮಗುವಿನ ವಾಯ್ಸ್‍ನಲ್ಲಿ ನಿವೇದಿತಾ ಗೌಡ ಅವರನ್ನು ನೆನೆಪಿಸುವ ಹಾಗೇ ಟೀ ಮಾಡುವ ವಿಧಾನವನ್ನು ಹೇಳಿದ್ದಾರೆ.
ಚಂದ್ರಕಲಾ ಮೋಹನ್ ಅವರು ಮಾಡುವ ಟೀ ಬಿರಿಯಾನಿನಾ ಅಥವಾ ಟೀ ನಾ ಎಂದು ಸುದೀಪ್ ಅವರಿಗೆ ಅನುಮಾನ ಬರುವ ಹಾಗೇ ಟೀ ಮಾಡೋದು ಹೇಳಿದ್ದಾರೆ. ರಘು ಅವರಿಗೆ ಇಲ್ಲಿವರೆಗೂ ಟೀ ಮಾಡೋದೆ ಗೊತ್ತಿಲ್ಲ ಆದರೂ ಟೀ ಕುಡಿಯುತ್ತಾರೆ. ಹೀಗೆ ಒಂಟಿ ಮನೆಯಲ್ಲಿ ವೈರಟಿ ವೈರಟಿ ಮಾಡುವ ವಿಧಾನವನ್ನು ಕೇಳಿ ಕಲಿತಿದ್ದಾರೆ.