ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ರೋಗದಿಂದ ಜಗತ್ತು ಇದೀಗ ನಿಧನವಾಗಿ ಮುಕ್ತವಾಗುತ್ತಿದೆ. ಕೋವಿಡ್‍ನಿಂದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹೀಗೆ ಹಲವಾರು ನಿಯಮಗಳಿಂದ ಜನರು ತತ್ತರಿಸಿಹೋಗಿದ್ದರು. ಇದೀಗ ಅಮೇರಿಕಾದ ಇಡಾಹೊ ಎಂಬ ರಾಜ್ಯದ ಜನರು ಒಂದೆಡೆ ಗುಂಪು ಸೇರಿ ಬ್ಯಾರೆಲ್‍ವೊಂದರ ಒಳಗೆ ಬೆಂಕಿ ಹಚ್ಚಿ ಮಾಸ್ಕ್ ಗಳನ್ನು ಸುಟ್ಟು ಹಾಕುವ ಮೂಲಕ ವಿಭಿನ್ನವಾಗಿ ಕೊರೊನಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೇವಲ ದೊಡ್ಡವರಷ್ಟೇ ಅಲ್ಲದೆ ಮಕ್ಕಳು ಸಹ ಪೋಷಕರೊಂದಿಗೆ ಒಂದು ಹೆಜ್ಜೆ ಮುಂದೆ ಹಾಕಿ, ತಮ್ಮ ಮಾಸ್ಕ್ ಗಳನ್ನು ಕಳಚಿ ಬ್ಯಾರೆಲ್‍ವೊಳಗಿರುವ ಬೆಂಕಿಗೆ ಹಾಕುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
Parents encouraging kids to burn masks on Idaho Capitol steps pic.twitter.com/VOYfOYqwwt
— Sergio Olmos (@MrOlmos) March 6, 2021
ಈ ವೀಡಿಯೋವನ್ನು ಸೆರ್ಗಿಯೋ ಓಲ್ಮೋಸ್ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ 2 ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಮೊದಲ ವೀಡಿಯೋ 4 ಮಿಲಿಯನ್(40 ಲಕ್ಷ) ವೀವ್ಸ್ ಪಡೆದುಕೊಂಡಿದ್ದು, ಮತ್ತೊಂದು ವೀಡಿಯೋ 65,000 ವಿವ್ಸ್ ಪಡೆದುಕೊಂಡಿದ್ದು, ಕಮೆಂಟ್‍ಗಳ ಸುರಿ ಮಳೆ ಹರಿದುಬರುತ್ತಿದೆ.
A child says “here fire, you hungry? here’s another mask”
A mask burning rally in boise, Idaho pic.twitter.com/MqNnaEKBP0
— Sergio Olmos (@MrOlmos) March 6, 2021