ಏನೇ ಬಂದ್ರೂ ಎದುರಿಸೋ ಶಕ್ತಿ ನನ್ನಲಿದೆ: ತನ್ವೀರ್ ಸೇಠ್

Public TV
2 Min Read
Tanveer Sait 2

ಬೆಂಗಳೂರು: ಯಾರಿಂದಲೂ ನನಗೆ ತೊಂದರೆ ಆಗಿಲ್ಲ. ಏನೇ ಬಂದರೂ ಎದುರಿಸುವ ಶಕ್ತಿ ನನ್ನಲಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಮೈಸೂರು ಮೇಯರ್ ಚುನಾವಣೆ ವೇಳೆ ಏನಾಯ್ತು ಅನ್ನೋದರ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ನನಗೆ ಜವಾಬ್ದಾರಿ ನೀಡಿತ್ತು. ಮೈತ್ರಿ ಮಾಡುವಂತೆ ಸೂಚನೆ ನೀಡಿದಾಗಿನಿಂದ ಅಂತಿಮ ಕ್ಷಣದವರೆಗೆ ಏನಾಯ್ತು ಎಲ್ಲ ಮಾಹಿತಿ 5 ಪುಟದ ವರದಿಯಲ್ಲಿದೆ ಎಂದು ತಿಳಿಸಿದರು.

Tanveer Sait 1

ಪಕ್ಷದ ವಿಚಾರ ಪಕ್ಷದಲ್ಲಿಯೇ ತೀರ್ಮಾನ ಆಗಬೇಕಿದೆ. ಚುನಾವಣೆ ವೇಳೆ ಸದನದಲ್ಲಿದ್ದರಿಂದ ಸಿದ್ದರಾಮಯ್ಯನವರ ಕರೆ ಸ್ವೀಕರಿಸಲಿಲ್ಲ. ಮೈಸೂರು ರಾಜಕಾರಣದಲ್ಲಿ ಶಾಸಕ ಜಮೀರ್ ಅಹ್ಮದ್ ಹಸ್ತಕ್ಷೇಪದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಯಾರು ಸೇಲ್ ಆಗಿದ್ರು, ಇಲ್ಲ ಅನ್ನೋದರ ಆರೋಪಗಳ ಬಗ್ಗೆ ಪಕ್ಷ ಆಂತರಿಕ ತನಿಖೆ ನಡೆಸುವ ಅಗತ್ಯವಿದ್ದು, ಇಂತಹ ಆರೋಪಗಳನ್ನ ನಾನು ಒಪ್ಪಲ್ಲ. ನನ್ನ ಮೇಲೆ ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಪಕ್ಷದ ಅಧ್ಯಕ್ಷರ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಈಗಾಗಲೇ ದಳದ ಮುಖಂಡರ ಕೆಲ ಹೇಳಿಕೆ ನೀಡಿದ್ದಾರೆ. ಆದ್ರೆ ಆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದರು. ಇದನ್ನೂ ಓದಿ: ಹುಲಿಯಾಗಿ ಅಬ್ಬರಿಸ್ತಿದ್ದ ಸಿದ್ದರಾಮಯ್ಯರನ್ನ ಕುಮಾರಣ್ಣ ಬೋನಿಗೆ ಹಾಕಿದ್ರು: ಪ್ರತಾಪ್ ಸಿಂಹ

Tanveer Sait 3

ನನಗೆ ಯಾರಿಂದಲೂ ತೊಂದರೆ ಇಲ್ಲ, ಏನೇ ಬಂದರೂ ಎದುರಿಸುವ ಶಕ್ತಿ ನನ್ನಲಿದೆ. ಪಕ್ಷದ ವಿಚಾರ ಇದಾಗಿದ್ದು, ಕೆಲವರ ಕಿವಿ ಕಚ್ಚುವ ಕೆಲಸದಿಂದಾಗಿ ಗೊಂದಲ ನಿರ್ಮಾಣವಾಗಿದೆ. ವಿಚಾರಣೆ ವೇಳೆ ಯಾರು ಅನ್ನೋದು ಹೊರ ಬರಲಿದೆ. ಕಾಂಗ್ರೆಸ್ ಒಂದು ಜಾತಿಗೆ ಸೀಮಿತವಾಗಿಲ್ಲ. ಬಹಿರಂಗವಾಗುವ ಅವರ ಹೆಸರು ಹೊರ ಬರುತ್ತದೆ. ಇದನ್ನೂ ಓದಿ: ಮನೆ ಕಟ್ಟಿದೋರು ನಾವು, ರಾಜ್ಯ ಆಳಲು ಬರೋರು ನೂರಾರು ಜನ: ತನ್ವೀರ್ ಸೇಠ್

Mysuru Palike 1

ಯಾವುದೇ ಆತಂಕ ಮತ್ತು ಭಯದ ವಾತಾವರಣದಲ್ಲಿ ತನ್ವೀರ್ ಸೇಠ್ ರಾಜಕಾರಣ ಮಾಡಲ್ಲ. ಏನೇ ಬಂದ್ರೂ ಎದುರಿಸಲು ಸಿದ್ಧ. ಪಕ್ಷದ ಅಧ್ಯಕ್ಷರು ಮುಳಬಾಗಿಲು ಹೋಗಿದ್ದು, ಎರಡ್ಮೂರು ದಿನಗಳಲ್ಲಿ ಭೇಟಿಯಾಗಿ ವರದಿ ಸಲ್ಲಿಸುತ್ತೇನೆ. ಪಕ್ಷದ ಕಾರ್ಯಾಧ್ಯಕ್ಷರಿಗೆ ವರದಿಯನ್ನ ಸಲ್ಲಿಸಲ್ಲ. ಸಿದ್ದರಾಮಯ್ಯನವರು ಕರೆದಾಗ ಹೋಗುವ ಸಂಕೋಚವಿಲ್ಲ. ಒಂದು ವೇಳೆ ಕರೆದ್ರೆ ಹೋಗಿ ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರು ಮೇಯರ್‌ ಚುನಾವಣೆ – ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆದ ಹೆಚ್‍ಡಿಡಿ

Share This Article
Leave a Comment

Leave a Reply

Your email address will not be published. Required fields are marked *