ಚಿಕ್ಕ ಚಿಕ್ಕ ಕಲ್ಲುಗಳಿಂದ ಪುಟ್ಟ ಕಾಲುವೆ ನಿರ್ಮಿಸಿಕೊಂಡ ಆದಿವಾಸಿ ರೈತರು

Public TV
1 Min Read
Canal 2

– ವಿದ್ಯುತ್, ಮೋಟಾರು ಬೇಡ
– ಮನವಿಗೆ ಸ್ಪಂದಿಸದ ಸಕಾರ, ರೈತರಿಂದಲೇ ಸಮಸ್ಯೆಗೆ ಪರಿಹಾರ

ಜೈಪುರ: ಜಗತ್ತಿನ ಸಂಪರ್ಕವಿಲ್ಲದೇ ದಟ್ಟಾರಣ್ಯದಲ್ಲಿ ಬದುಕು ಕಟ್ಟಿಕೊಂಡ ಆದಿವಾಸಿಗಳ ಜೀವನ ಶೈಲಿ ಮಾದರಿ ಆಗಿರುತ್ತೆ. ಆಧುನಿಕ ಜಗತ್ತಿನ ಒತ್ತಡಗಿಳಲ್ಲದ ಅವರ ನೆಮ್ಮದಿಯ ಬದುಕು ನಮ್ಮದಾಗಿರಲಿ ಎಂದು ಎಷ್ಟೋ ಜನ ಬಯಸುತ್ತಾರೆ. ಇದೀಗ ಅಂತವುದೇ ಒಂದು ಆದಿವಾಸಿಗಳ ಉಪಾಯ ಸರ್ಕಾರಕ್ಕೆ ಚಾಟಿ ಬೀಸಿದೆ. ಅರಣ್ಯದಲ್ಲಿ ಚಿಕ್ಕ ಚಿಕ್ಕ ಕಲ್ಲುಗಳನ್ನಿರಿಸಿ ಪುಟ್ಟ ಕಾಲುವೆ ನಿರ್ಮಿಸಿಕೊಂಡಿದ್ದಾರೆ.

ರಾಜಸ್ಥಾನದ ಉದಯಪುರದಿಂದ 125 ಕಿ ಲೋ ಮೀಟರ್ ದೂರದಲ್ಲಿರುವ ಆದಿವಾಸಿ ಕ್ಷೇತ್ರ ಕೊಟೆಡಾದ ವೀರಾ ಗ್ರಾಮದ  ಸುಮಾರು 20 ರೈತ ಕುಟುಂಬಗಳು ವಾಸವಾಗಿವೆ. ಎಲ್ಲ ಕುಟುಂಬಗಳ ತುಂಡು ಕೃಷಿ ಭೂಮಿಯನ್ನ ಹೊಂದಿದ್ದು, ಅಷ್ಟರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಮಳೆಗಾಲದ ಮಳೆಯಿಂದ ಒಂದು ಬೆಳೆ ಬೆಳೆಯುತ್ತಿದ್ದ ರೈತ ಕುಟುಂಬಗಳಿಗೆ ಎರಡನೇ ಬೆಳೆ ಗಗನ ಕುಸುಮವಾಗಿತ್ತು.

Canal 1

ಈ ಸಮಸ್ಯೆಗೆ ಪರಿಹಾರ ನೀಡುವಂತೆ ಆದಿವಾಸಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಹಾಗಾಗಿ ತಾವೇ ಕಾಲುವೆ ನಿರ್ಮಿಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಿದ್ದಾರೆ. ಗಗನ ಕುಸುಮವಾಗಿದ್ದ ಎರಡನೇ ಬೆಳೆಯನ್ನ ಬೆಳೆಯುತ್ತಿದ್ದಾರೆ.

ವಿದ್ಯುತ್ ಕೇಳದ ಪುಟ್ಟ ಕಾಲುವೆ: ಯೆಸ್, ರೈತರು ವಿದ್ಯುತ್ ಕೇಳದ ಪುಟ್ಟ ಕಾಲುವೆ ನಿರ್ಮಿಸಿಕೊಂಡಿದ್ದಾರೆ. ಕೃಷಿ ಜಮೀನಿನ ಮೇಲ್ಭಾಗದಲ್ಲಿ ನದಿ ಹರಿಯುತ್ತಿದೆ. ಹಾಗಾಗಿ ನದಿಯಿಂದಲೇ ಪುಟ್ಟ ಕಾಲುವೆ ನಿರ್ಮಿಸಲು ರೈತ ಕುಟುಂಬಗಳು ಪ್ಲಾನ್ ಮಾಡಿದ್ದವು. ಆದ್ರೆ ಅರಣ್ಯ ಪ್ರದೇಶವಾಗಿದ್ದರಿಂದ ಭೂಮಿ ಸಮತಟ್ಟಾಗಿರಲಿಲ್ಲ. ಆದ್ದರಿಂದ ಅರಣ್ಯದಲ್ಲಿಯ ಕಲ್ಲುಗಳಿಂದಲೇ ಸೇತುವೆ ನಿರ್ಮಿಸಿ, ಮೇಲೆ ಪ್ಲಾಸ್ಟಿಕ್ ಕವರ್ ಹಾಕಿದ್ದಾರೆ. ಈ ಪ್ಲಾಸ್ಟಿಕ್ ಪೇಪರ್ ಮೇಲೆ ನೀರು ಹರಿದು ರೈತರ ಜಮೀನುಗಳಿಗೆ ತಲುಪುತ್ತದೆ.

Farmers APMC 1

ಪ್ಲಾಸ್ಟಿಕ್ ಪೇಪರ್ ಕೊಳೆಯಲ್ಲ. ಹಾಗಾಗಿ ಅದನ್ನ ಕಲ್ಲುಗಳ ಸೇತುವೆ ಮೇಲೆ ಹಾಕಲಾಯ್ತು. ಮಳೆ ಮತ್ತು ಪ್ರವಾಹ ಹೆಚ್ಚಾದಾಗ ಕಲ್ಲುಗಳು ಬಿದ್ದಿರುತ್ತವೆ. ಈ ಸಮಯದಲ್ಲಿ ಸೇತುವೆ ಕೆಲಸಕ್ಕಾಗಿ ಪಾಳಿಯ ಮೇಲೆ ಕೆಲಸ ಮಾಡುತ್ತೇವೆ. ಹಾಗೆಯೇ ಎಲ್ಲರೂ ಸರದಿಯಂತೆ ನೀರನ್ನ ತೆಗೆದುಕೊಳ್ಳುವಂತೆ ಎಂದು ರೈತರು ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *