– ಮುಳವಾಡದ ಬಳಿ ನನ್ನ ಜಮೀನು ಇಲ್ಲ
ವಿಜಯಪುರ: ವಿಮಾನ ನಿಲ್ದಾಣದ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ವಿಜಯಪುರದ ಮುಳವಾಡ ಬಳಿ ವಿಮಾನ ನಿಲ್ದಾಣ ಮಾಡೋದು ನನ್ನ ಆಶಯ ಅಗಿತ್ತು. ಮುಳವಾಡದ ಬಳಿ ನನ್ನ ಜಮೀನು ಇರೋದರಿಂದ ವಿಮಾನ ನಿಲ್ದಾಣ ಮಾಡಲು ಕಾರಜೋಳ ಮುಂದಾಗಿದ್ದಾರೆ ಅಂತ ಒಬ್ಬರು ಹೇಳಿದರು. ಅವರ ಹೇಳಿಕೆಯನ್ನ ಆಧರಿಸಿಯೇ ಸುದ್ದಿಯೂ ಬಿತ್ತರವಾಗಿದ್ದರಿಂದ ಭುರಣಾಪುರದಲ್ಲಿ ವಿಮಾನ ನಿಲ್ದಾಣಕ್ಕೆ ಮುಂದಾದೆ ಎಂದು ಯತ್ನಾಳ್ ಹೆಸರು ಹೇಳದೇ ಡಿಸಿಎಂಂ ಗೋವಿಂದ ಕಾರಜೋಳ ಟಾಂಗ್ ಕೊಟ್ಟರು.
ಮುಳವಾಡ ಗ್ರಾಮದ ಹತ್ತಿರ ನನ್ನದು ಯಾವ ಜಮೀನು ಇಲ್ಲ. ಅಲ್ಲಿ ಸರ್ಕಾರಕ್ಕೆ ಸೇರಿದ 2,500 ಎಕರೆ ಜಮೀನಿತ್ತು. ಮುಂದೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದ್ರೂ ಅನುಕೂಲ ಅಗುತ್ತಿತ್ತು ಅನ್ನೋದು ನನ್ನ ಯೋಚನೆ ಇತ್ತು. ಇನ್ನು ನೀವು ಯಾರೋ ಹೇಳಿದ್ರೂ ಅಂತಾ ಸುದ್ದಿ ಮಾಡಿದಿರಿ. ಅದರಿಂದ ನನಗೆ ಬಹಳ ಬೇಸರ ಆಯ್ತು ಎಂದರು.
ಐತಿಹಾಸಿಕ ಜಿಲ್ಲೆ ವಿಜಯಪುರ ಜನರ ದಶಕಗಳ ಕನಸು ನಾಳೆ ನನಸಾಗಲಿದೆ. ವಿಜಯಪುರದ ವಿಮಾನ ನಿಲ್ದಾಣಕ್ಕೆ ಸಿಎಂ ಯಡ್ಡಿಯೂರಪ್ಪ ಶಿವಮೊಗ್ಗದಿಂದ ವರ್ಚೂವಲ್ ಸಭೆ ಮುಖಾಂತರ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ದೇಶಕ್ಕೊಂದು ಸಂವಿಧಾನವಿದೆ. ಅದರ ಆಶಯದಂತೆ ತುಳಿತಕ್ಕೊಳಗಾದವರು, ನಿರ್ಲಕ್ಷಕ್ಕೊಳಗಾದವರು, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರನ್ನು ಮೀಸಲಾತಿಗೆ ಸೇರಿಸಬೇಕು ಎಂದು ಹೇಳುವ ಮೂಲಕ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಮೇಲ್ವರ್ಗದ ಹೋರಾಟಗಾರರಿಗೆ ಟಾಂಗ್ ನೀಡಿದರು.