ನವದೆಹಲಿ: ರಾಷ್ಟ್ರ ರಾಜಧಾನಿ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶುಕ್ರವಾರ ತಡರಾತ್ರಿ ಭೂಕಂಪಿಸಿದ ಅನುಭವವಾಗಿದೆ.
ಜಮ್ಮು-ಕಾಶ್ಮೀರ, ಪಂಜಾಬ್, ಚಂಡೀಗಢ, ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ ಸೇರಿ ಹಲವೆಡೆ ಭೂಕಂಪನ ಉಂಟಾಗಿದೆ. ರಾತ್ರಿ ಸುಮಾರು 10.31ರ ವೇಳೆಗೆ ಭೂಮಿ ಕಂಪಿಸಿದ್ದು, ನಿದ್ದೆಯ ಮಂಪರಿನಲ್ಲಿದ್ದ ಜನ ಗಾಬರಿಯಿಂದ ಮನೆಯಿಂದ ಹೊರಗೋಡಿದ್ದಾರೆ.
ಭೂಮಿಯ ಮೇಲ್ಮೈನಿಂದ 74 ಕಿಲೋಮೀಟರ್ ಆಳದಲ್ಲಿ ಕಂಪನದ ಬಿಂದು ಪತ್ತೆಯಾಗಿದೆ. ತಜಕಿಸ್ತಾನದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆ ಆಗಿದ್ದು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ ಅಂತ ರಾಷ್ಟ್ರೀಯ ಭೂಕಂಪನಾಶಾಸ್ತ್ರ ಅಧ್ಯಯನ ಕೇಂದ್ರ ಮಾಹಿತಿ ನೀಡಿದೆ.
ಪಂಜಾಬ್‍ನ ಅಮೃತಸರದಲ್ಲಿ ಭೂಕಂಪನದ ತೀವ್ರತೆ 6.1ರಷ್ಟು ದಾಖಲಾಗಿದೆ. ಆದರೆ ಅದೃಷ್ಟವಶಾತ್ ಎಲ್ಲೂ ಪ್ರಾಣಹಾನಿ ಸಂಭವಿಸಿಲ್ಲ.