ಬೆಂಗಳೂರು: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸು ಜಾರಿ ಮಾಡಿರುವ ಬೆನ್ನಲ್ಲೇ ಯತ್ನಾಳ್ ಟಕ್ಕರ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್ ಅರುಣ್ ಸಿಂಗ್ ಹೇಳಿಕೆ ಸ್ವಾಗತ ಮಾಡುತ್ತೇನೆ. ಅವರ ಹೇಳಿಕೆ ಬೇಕಾದ ಉತ್ತರವನ್ನೂ ನಾನು ಕೊಡುತ್ತೇನೆ. ನನಗೆ ನೊಟೀಸ್ ಕೊಡೋಕೆ ಡಿಮ್ಯಾಂಡ್ ಇತ್ತು. ನನ್ನ ಮಾತಿಗೆ ಅಷ್ಟು ಡಿಮ್ಯಾಂಡ್ ಇದೆ ನೋಡಿ ಎಂದು ವ್ಯಂಗ್ಯವಾಡಿ ತೀರುಗೇಟು ಕೊಟ್ಟಿದ್ದಾರೆ.
ನಾನು ಎಲ್ಲವನ್ನೂ ಎದುರಿಸುತ್ತೇನೆ. ನನ್ನನ್ನು ಮೂರುಭಾರಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಆದರೂ ನಾನು ಯಾವತ್ತೂ ಹೆದರಿದವನಲ್ಲ. ಎಲ್ಲರನ್ನೂ ಎದುರಿಸಿ ಪಕ್ಷೇತರನಾಗಿ ನಾನು ಪರಿಷತ್ ಗೆ ಬಂದಿದ್ದೆ. ನನ್ನನ್ನ ಅಮಿತ್ ಶಾ ಅವರೇ ಕರೆದು ಅವಕಾಶ ಕೊಟ್ಟಿರುವುದು. ಅವರ ಸೂಚನೆ ಮೇರೆಗೆ ನಾನು ಬಿಜೆಪಿಗೆ ಸೇರಿದ್ದು. ಯತ್ನಾಳ್ ಅವರು ಪಕ್ಷಕ್ಕೆ ಬಂದರೆ ಲಾಭ ಇದೆ ಎಂದು ಪರಿಗಣಿಸಿ ಸೇರಿಸಿಕೊಂಡಿದ್ದರು ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ.