ವಿಜಯಪುರ: ಕಾಲ ಬದಲಾವಣೆ ಆಗುತ್ತದೆ. ಉತ್ತರಾಯಣದಲ್ಲೇ ಬದಲಾವಣೆ ಪರ್ವ ಆರಂಭವಾಗಿದ್ದು, ಯುಗಾದಿಗೆ ಎಲ್ಲವೂ ಅಂತ್ಯವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ಪರೋಕ್ಷವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾಗ್ತಾರೆ ಎಂದು ಹೇಳಿದರು.
ನಮ್ಮ ಮುಖ್ಯಮಂತ್ರಿಗಳಿಗೆ ಡಿಕೆಶಿ, ಸಿದ್ಧರಾಮಯ್ಯ, ಜಮೀರ್ ಅಹ್ಮದ್, ಕೆ.ಜೆ.ಜಾರ್ಜ್ ಅವರಿಗೆ ಯಾರಾದ್ರು ಏನಾದ್ರು ಅಂದ್ರೆ ಸಹಿಸಕಾಗಲ್ಲ. ಅವರನ್ನ ಮುಗಿಸೋಕೆ ಮುಂದಾಗುತ್ತಾರೆ. ಕಾಂಗ್ರೆಸ್ ಈ ನಾಯಕರೆಲ್ಲ ಸಿಎಂ ಪಾರ್ಟನರ್ ಗಳು. ಬಿಜೆಪಿಯ ಎಲ್ಲರು ಅಸಮಾಧಾನದಲ್ಲಿದ್ದು, ಕಾಲ ಬದಲಾವಣೆ ಅಗುತ್ತೆ ನೋಡ್ತಾ ಇರಿ. ಮಾದುಸ್ವಾಮಿ ಯವರು ಒಳ್ಳೆಯ ಸಚಿವರು. ಅವರು ವಿಧಾನ ಸಭೆಯಲ್ಲಿ ನಮ್ಮ ಸರ್ಕಾರ ಬರುವಾಗ ಅವರು ಸಮರ್ಥವಾಗಿ ಎದುರಿಸಿದವರು. ಕಳೆದ ವಿಧಾನಸಭೆಯಲ್ಲಿ ಡಿಕೆಶಿಯವರನ್ನ ಹಿಗ್ಗಾ ಮುಗ್ಗಾ ಜಾಡಿಸುವ ಮೂಖಾಂತರ ಡಿಕೆಶಿ ಮಾತನಾಡದಂತೆ ಮಾಡಿದ್ದರು ಎಂದು ಮಾಧುಸ್ವಾಮಿ ಪರ ಬ್ಯಾಟ್ ಬೀಸಿದರು.
ಖಲಿಸ್ತಾನ್ ಹೋರಾಟ ಮುಗಿದ ವಿಚಾರ. ಪಾಕಿಸ್ತಾನದ ಪರ ಘೋಷಣೆ ಕೂಗುವಂತಹ ತಾಯಿಯ ಗಂಡರು ನಮ್ಮ ದೇಶದಲ್ಲಿದ್ದಾರೆ. ಪಾಕಿಸ್ತಾನದ ಪರ ಘೋಷಣೆ ಕೂಗುವ ಕೆಲ ಹುಳುಗಳು ಇದ್ದಾವೆ. ಕಾಂಗ್ರೆಸ್, ಕಮ್ಯುನಿಸ್ಟರು ಬೆಳೆಸಿದ ಎಲ್ಲ ಹುಳಗಳು ಈಗ ಹೊರಗೆ ಬಿದ್ದಿವೆ. ದೇಶ ವಿರೋಧಿ ಸಂಘಟನೆಗಳ ಬಣ್ಣ ಬಯಲಾಗಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ತಾರೆ ಎಂದರು.
ದೆಹಲಿ ಹೋರಾಟಕ್ಕೆ ಪಾಕಿಸ್ತಾನ, ಚೀನಾ, ಕಾಂಗ್ರೆಸ್ ನಿಂದ ಫಂಡಿಂಗ್ ಆಗಿದೆ. ದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಕುಮ್ಮಕ್ಕಿದೆ. ದೇಶ ವಿರೋಧಿ ಶಕ್ತಿಗಳು ಜೊತೆಯಾಗಿ ಪ್ರಧಾನಿ ಹೆಸರು ಹಾಳು ಮಾಡಲು ಈ ಕೃತ್ಯ ಎಸಗಿದ್ದಾರೆ. ನೂತನ ಕಾಯ್ದೆ ಹಿಂಪಡೆಯಿರಿ ಎನ್ನುವದಕ್ಕೆ ದೊಡ್ಡ ಲಾಬಿ ಇದೆ. ರೈತ ಮಸೂದೆ ವಿಫಲಗೊ ಳಿಸಲು ಇದೊಂದು ಷಡ್ಯಂತ್ರ. ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳು ಸೇರಿ ಬಿಜೆಪಿ ಹೆಸರು ಕೆಡಿಸಲು ನಡೆಸಿದ ಸಂಚು ಎಂದು ಆರೋಪಿಸಿದರು.