ಹಾಸನ: ಕೆಇಬಿ ನೌಕರನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಹಾಸನದ ಹೂವಿನಹಳ್ಳಿ ಕಾವಲು ಬಳಿನಡೆದಿದೆ.
ಸಂತೋಷ್ (36) ಮೃತ ಕೆಇಬಿ ನೌಕರ. ಹೂವಿನಹಳ್ಳಿ ಕಾವಲು ಬಳಿಯ ಜಮೀನಿನಲ್ಲಿ ಸಂತೋಷ್ ಮೃತದೇಹ ಪತ್ತೆಯಾಗಿದೆ. ಶವದ ಬಳಿ ಮದ್ಯದ ಬಾಟಲ್ ಮತ್ತು ಊಟದ ಪ್ಯಾಕೇಟ್ ಲಭ್ಯವಾಗಿದ್ದು, ಕೊಲೆಗೂ ಮುನ್ನ ಹಂತಕರು ಪಾರ್ಟಿ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಘಟನ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಶವ ಪರೀಕ್ಷೆಗಾಗಿ ಮೃತದೇಹವನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಸಂತೋಷ್ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.