ಬೆಂಗಳೂರು: ಹುಟ್ಟುಹಬ್ಬದ ದಿನದಂದು ಮನೆಯ ಹತ್ತಿರ ಬಂದು ನಿರಾಶರಾಗಬೇಡಿ ಎಂದು ರೋರಿಂಗ್ ಸ್ಟಾರ್, ಮದಗಜ ಶ್ರೀಮುರಳಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಶ್ರೀಮುರಳಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾಳೆ ಶ್ರೀಮುರಳಿ ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಈ ಬಾರಿ ನನ್ನ ಹುಟ್ಟು ಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣ ಕೋವಿಡ್. ನಮ್ಮಿಂದ ಬೇರೆ ಯಾರಿಗೂ ಅನಾನುಕೂಲತೆಗಳು ಆಗುವುದ ಬೇಡ. ನಾನು ಕಾರಣಾಂತರಗಳಿಂದ ಮನೆಯಲ್ಲಿ ಇರುವುದಿಲ್ಲ. ಯಾರು ಸಹಿತ ಮನೆ ಹತ್ತಿರ ಬಂದು ಬೇಸರರಾಗಬೇಡಿ. ಯಾವ ಹಾರ, ಕೇಕ್, ಗಿಫ್ಟ್ ಗಳಿಗೆ ಖರ್ಚು ಮಾಡಬೇಡಿ. ಬದಲಾಗಿ ಹಸಿವಿರುವವರಿಗೆ ಕೈಯಲ್ಲಿ ಆದಷ್ಟು ಅನ್ನದಾನವನ್ನ ಮಾಡಿ ಎಂದು ಮುರಳಿ ಮನವಿ ಮಾಡಿಕೊಂಡಿದ್ದಾರೆ.
ನಿಮ್ಮನ್ನು ನೋಡಲು ಆಗದ ಬೇಸರ ನನಗೂ ಇದೆ. ಹಾಗಾಗಿ ಅಭಿಮಾನಿ ದೇವದೇ ಆದಷ್ಟು ಬೇಗ ಎಲ್ಲವೂ ಸುಧಾರಿಸಿಕೊಂಡ ನಂತರ ಸಿಗೋಣ. ನಿಮ್ಮ ಪ್ರೀತಿ, ಆಕ್ಕರೆಯನ್ನು ನಾನು ತಿರಸ್ಕರಿಸುವುದಿಲ್ಲ. ನಿಮ್ಮ ಅಭಿಮಾನ, ಪ್ರೀತಿ, ಹಾರೈಕೆ ನನಗೆ ಇಂದು, ಎಂದೆಂದೂ ಬೇಕು. ಅದಕ್ಕೆ ನೀವು ಮಾಡಬೇಕಾಗಿರುವುದು ಏನೆಂದರೆ, ನೀವು ಇರುವ ಕಡೆಯಿಂದಲೇ ನನ್ನನ್ನು ಹಾರೈಸಿ, ಆಶೀರ್ವದಿಸಿ. ಅದೇ ನೀವು ನನಗೆ ಹುಟ್ಟು ಹಬ್ಬದಂದು ಕೊಡುವ ಬಹುದೊಡ್ಡ ಕಾಣಿಕೆ ಎಂದು ಶ್ರೀಮುರಳಿ ಹೇಳಿದ್ದಾರೆ.